ಸಿರಗುಪ್ಪ ತಾಲೂಕಿನ ಎಚ್.ಹೊಸಳ್ಳಿಗೆ ಬ್ಯಾರಿಕೇಡ್ ದಿಗ್ಬಂಧನ

03042020 Siraguppa H Hosalli village Road stop
Published on

ಸಿರಗುಪ್ಪ: ಬಾಲಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಎಚ್.ಹೊಸಳ್ಳಿ ಗ್ರಾಮಕ್ಕೆ ಪ್ರವೇಶಿಸದಂತೆ ಶುಕ್ರವಾರ 9 ಕಡೆ ಬ್ಯಾರಿಕೇಡ್ ಹಾಕಿ ನಿಷೇಧ ಹೇರಲಾಯಿತು.

ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಇಒ ಶಿವಪ್ಪ ಸುಬೇದಾರ್, ಟಿಎಚ್‌ಒ ಸುರೇಶಗೌಡ, ವೈದ್ಯರಾದ ನಾಗರಾಜ, ಶಶಿಕುಮಾರ್, ಪ್ರಶಾಂತ, ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಲ್ಲದೆ, ಆರೋಗ್ಯ ಇಲಾಖೆಯಿಂದ ವೈರಸ್ ಬಗ್ಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net