ಸಿರಗುಪ್ಪದಲ್ಲಿ ಗಾಂಧಮ್ಮ ದೇವಿ ಜಾತ್ರೆ ಸಂಭ್ರಮ, ಅಗ್ನಿಕೊಂಡ ಹಾಯ್ದು ಹರಕೆ ತೀರಿಸಿದ ಭಕ್ತರು

09022020 Siraguppa Gandhamma Devi Fair
Published on

ಸಿರಗುಪ್ಪ: ನಗರದ ತುಂಗಭದ್ರಾ ನದಿ ತೀರದಲ್ಲಿರುವ ಗ್ರಾಮದೇವತೆ ಶ್ರೀ ಗಾಂಧಮ್ಮ ದೇವಿ ಜಾತ್ರೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಹಾರುದ್ರಾಭಿಷೇಕದ ನಂತರ ವಿಶೇಷ ಪೂಜೆ ನಡೆಸಿ ಬೆಳ್ಳಿ ಆಭರಣಗಳಿಂದ ದೇವಿಗೆ ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು. ನಂತರ ಅಗ್ನಿಕೊಂಡ ಹಾಯುವ ಕಾರ್ಯಕ್ರಮದಲ್ಲಿ ದೇವಿ ಉತ್ಸವ ಮೂರ್ತಿಯೊಂದಿಗೆ ಅರ್ಚಕರು ಪ್ರವೇಶದ ಬಳಿಕ ನೂರಾರು ಭಕ್ತರು ಅಗ್ನಿ ತುಳಿದು ಹರಕೆ ತೀರಿಸಿದರು. ಆನಂತರ ಮಡಿತೇರು ಎಳೆಯಲಾಯಿತು. ಸಿರಗುಪ್ಪ, ದೇಶನೂರು, ಇಬ್ರಾಹಿಂಪುರ, ಗಡ್ಡೆವಿರುಪಾಪುರ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net