ಸಿರಗುಪ್ಪದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

200122 Siraguppa Bhoomipooja
ಸಿರಗುಪ್ಪದ 14ನೇ ವಾರ್ಡ್‌ನ ಕುಂಬಾರ ಓಣಿಯಲ್ಲಿ 15ನೇ ಹಣಕಾಸು ಯೋಜನೆಯಡಿ 9 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎಂ.ಎಸ್.ಸೊಮಲಿಂಗಪ್ಪ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
Published on

ಸಿರಗುಪ್ಪ: ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆಯಲಿರುವ 49 ಲಕ್ಷ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಎಸ್.ಸೊಮಲಿಂಗಪ್ಪ ಭೂಮಿ ಪೂಜೆ ಶುಕ್ರವಾರ ನೆರವೇರಿಸಿದರು.

ನಂತರ ಮಾತನಾಡಿ, 14ನೇ ವಾರ್ಡ್‌ನ ಕುಂಬಾರ ಓಣಿಯಲ್ಲಿ 15ನೇ ಹಣಕಾಸು ಯೋಜನೆಯಡಿ 9ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ, 13ನೇ ವಾರ್ಡ್‌ನಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಪೈಪ್‌ಲೈನ್ ಕಾಮಗಾರಿ, 10ನೇ ವಾರ್ಡ್‌ನಲ್ಲಿ 7 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ, 8ನೇ ವಾರ್ಡ್‌ನಲ್ಲಿ 7 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ, 3 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ಮತ್ತು ಎಸ್‌ಎಫ್‌ಸಿ ಅನುದಾನದಲ್ಲಿ 8ನೇ ವಾರ್ಡ್‌ನಲ್ಲಿ 6 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ, 15ನೇ ವಾರ್ಡ್‌ನಲ್ಲಿ 8ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ, 7 ಲಕ್ಷ ರೂ.ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗಳು ನಡೆಯುಲಿವೆ. ಇವುಗಳ ಗುಣಮಟ್ಟದ ಬಗ್ಗೆ ವಾರ್ಡ್ ಸದಸ್ಯರು, ಸಾರ್ವಜನಿಕರು ನಿಗಾ ವಹಿಸಬೇಕು. ಆಗ ಮಾತ್ರ ಉತ್ತಮ ಕೆಲಸ ನಡೆಯಲು ಸಾಧ್ಯ ಎಂದರು.

ನಗರಸಭೆ ಅಧ್ಯಕ್ಷೆ ಕೆ.ಸುಶೀಲಮ್ಮ, ಎಇಇ ಗಂಗಾಧರ ಗೌಡ, ಎಇ ರಮೇಶ ಮತ್ತು ನಗರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net