ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂತಿಬೇಲಿ ಹಾಕಿ

Sirigeri garbage unit
ಸಿರಿಗೇರಿಯಲ್ಲಿ ಗ್ರಾಪಂ ಪಿಡಿಒ ರಾಮಪ್ಪಗೆ ಕುರಿಗಾಹಿಗಳು ಶುಕ್ರವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಬಿಚ್ಚುಗತ್ತಿ ಮಲ್ಲಿಕಾರ್ಜುನ, ಬಿ.ಎರ‌್ರಪ್ಪ, ಬಿ.ಎಚ್.ಚಂದ್ರ, ಬಿ.ನಾಗರಾಜ, ಬಿ.ಕೋಮಾರಪ್ಪ, ಯು.ಹನುಮಂತಪ್ಪ, ಎಚ್.ರುದ್ರ ಇತರರಿದ್ದರು.
Published on

ಸಿರಿಗೇರಿ: ಗ್ರಾಮದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತ ತಂತಿ ಬೇಲಿ ಹಾಕಿಸಬೇಕೆಂದು ಆಗ್ರಹಿಸಿ ಕುರಿಗಾಹಿಗಳು ಶುಕ್ರವಾರ ಪಿಡಿಒ ರಾಮಪ್ಪಗೆ ಮನವಿ ಸಲ್ಲಿಸಿದರು.

ಕುರಿಗಾಹಿ ಬಿಚ್ಚುಗತ್ತಿ ಮಲ್ಲಿಕಾರ್ಜುನ ಮಾತನಾಡಿ, ಸುಮಾರು ಹತ್ತು ಕುಟುಂಬಗಳು ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿವೆ. ಊರಾಚೆ ಗುಡ್ಡಗಾಡು ಪ್ರದೇಶಗಳಲ್ಲಿ ಕುರಿಹಟ್ಟಿ ಹಾಕಿಕೊಂಡಿದ್ದೇವೆ. ಆದರೆ, ಹತ್ತಿರದ ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತ ಯಾವುದೇ ತಂತಿ ಬೇಲಿ ಹಾಕದ ಕಾರಣ ಬೀದಿ ನಾಯಿಗಳು, ಇತರ ಪ್ರಾಣಿಗಳ ಹಾವಳಿ ಹೆಚ್ಚಿವೆ.

ಅವುಗಳು ಕುರಿಹಟ್ಟಿ ಮೇಲೆ ದಾಳಿ ಮಾಡಿ ಕುರಿಗಳನ್ನು ತಿಂದು ಹಾಕುತ್ತಿವೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಆದ್ದರಿಂದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂತಿ ಬೇಲಿ ಹಾಕಿಸಬೇಕೆಂದು ಒತ್ತಾಯಿಸಿದರು.

ಪಿಡಿಒ ರಾಮಪ್ಪ ಮಾತನಾಡಿ, ಇನ್ನೊಂದು ವಾರದೊಳಗೆ ನರೇಗಾ ಯೋಜನೆಯಡಿ ತಂತಿ ಬೇಲಿ ಹಾಕಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಬಿ.ಎರ‌್ರಪ್ಪ, ಬಿ.ಎಚ್.ಚಂದ್ರ, ಬಿ.ನಾಗರಾಜ, ಬಿ.ಕೋಮಾರಪ್ಪ, ಯು.ಹನುಮಂತಪ್ಪ, ಎಚ್.ರುದ್ರ, ಶಿವಪ್ಪ, ಎನ್.ಮಾರೇಶ್, ಕೆ.ಹುಲಿಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net