ಮಲ್ಲೆಮ್ಮ ಮನೆಗೆ ವಿದ್ಯುತ್ ಸಂಪರ್ಕ

Sirigeri vijayavani effect news
ಸಿರಿಗೇರಿಯಲ್ಲಿ ಗ್ರಾಪಂ ಸಿಬ್ಬಂದಿ ವಡ್ರು ಮಲ್ಲೆಮ್ಮ ಮನೆ ಸ್ವಚ್ಛಗೊಳಿಸಿ ಹೊಸ ಸೀರೆ ನೀಡಿರುವುದು.
Published on

ಸಿರಿಗೇರಿ: ಗ್ರಾಮದ ಬಸವನಪೇಟೆಯಲ್ಲಿ ಏಕಾಂಗಿ ಜೀವನ ನಡೆಸುತ್ತಿರುವ ವೃದ್ಧೆ ವಡ್ರು ಮಲ್ಲೆಮ್ಮ ಮನೆಗೆ ಪಿಡಿಒ ಉಪ್ಪಾರ್ ರಾಮಪ್ಪ ಸೋಮವಾರ ಭೇಟಿ ನೀಡಿದ್ದರು.

25 ಕೆಜಿ ಅಕ್ಕಿ, ಬೇಳೆ, ಬೆಲ್ಲ, ಅಡುಗೆ ಎಣ್ಣೆಯನ್ನು ಎದುರು ಮನೆಯ ಆಂಜಿನೆಮ್ಮಗೆ ನೀಡಿ ಸಮಯಕ್ಕೆ ಸರಿಯಾಗಿ ಕೊಡುವಂತೆ ತಿಳಿಸಿದರು. ಗ್ರಾಪಂ ಸ್ವಚ್ಛತಾ ಸಿಬ್ಬಂದಿ ಮಲ್ಲೆಮ್ಮ ಅವರಿಗೆ ಸ್ನಾನ ಮಾಡಿಸಿ ಹೊಸ ಸೀರೆ ಉಡಿಸಿದರು.

ನಂತರ ಮನೆಗೆ ಸುಣ್ಣ-ಬಣ್ಣ ಬಳಿದರು. ಮಲ್ಲೆಮ್ಮ ನಿವಾಸಕ್ಕೆ ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಯಿತು. ‘ಪಾಳು ಮನೆಯಲ್ಲಿ ಒಂಟಿ ಜೀವನ’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಸೋಮವಾರ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ಮಲ್ಲೆಮ್ಮ ನಿವಾಸಕ್ಕೆ ಆಗಮಿಸಿ ಸೌಲಭ್ಯ ಕಲ್ಪಿಸಿದರು. ಗ್ರಾ.ಪಂ. ಸದಸ್ಯರಾದ ವಿ.ಶೇಖರ್, ವಿ.ರಮೇಶ್ ಇತರರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ಪ್ರತಿಕ್ರಿಯಿಸಿ, ಮಲ್ಲೆಮ್ಮ ಅವರಿಗೆ ಮಾಸಾಶನ ಮರು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net