ಶಾಲೆಗೆ ಹೋಗಲು ಪ್ರತಿದಿನ ಐದು ಕಿಮೀ ನಡಿಗೆ

Sirigeri Bus Problm
ನವನಗರದಿಂದ ಮುದ್ದಟ್ಟನೂರು, ಹಾವಿನಾಳು ಗ್ರಾಮದ ಶಾಲೆಗೆ ವಿದ್ಯಾರ್ಥಿಗಳು ನಡೆದು ಹೋಗುತ್ತಿರುವುದು.
Published on

ಸಿರಿಗೇರಿ: ಸಮೀಪದ ನವನಗರ, ಮುದ್ದಟ್ಟನೂರು ಕ್ಯಾಂಪ್‌ಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಮಕ್ಕಳು ಶಿಕ್ಷಣ ಪಡೆಯಲು ಪ್ರತಿದಿನ ಐದು ಕಿಮೀ ದೂರ ನಡೆದು ಹೋಗಬೇಕಿದೆ.

ನಿತ್ಯ 5 ಕಿಮೀ ದೂರವಿರುವ ಮುದ್ದಟ್ಟನೂರು, ಹಾವಿನಾಳು ಗ್ರಾಮದ ಸರ್ಕಾರಿ ಶಾಲೆಗಳಿಗೆ ಕಾಲ್ನಡಿಗೆಯಲ್ಲೇ ಹೋಗಿ ಬರಬೇಕಿದೆ. ನವನಗರ, ಮುದ್ದಟ್ಟನೂರು ಕ್ಯಾಂಪ್‌ನಲ್ಲಿ 500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಹುತೇಕರು ಕೂಲಿ ನಂಬಿ ಜೀವನ ನಡೆಸುತ್ತಾರೆ.

ಮಕ್ಕಳನ್ನೂ ದುಡಿಯಲು ಕಳಿಸುತ್ತಿದ್ದರು. ಆದರೆ, ಶಿಕ್ಷಕರ ಮನವೊಲಿಕೆಯಿಂದ ಶಾಲೆಗೆ ಕಳಿಸುತ್ತಿದ್ದಾರೆ. ಆದರೆ, ಬಸ್ ವ್ಯವಸ್ಥೆ ಕಲ್ಪಿಸದ ಕಾರಣ ಐದು ಕಿಮೀ ನಡೆದು ಹೋಗಿ ಬರುವುದು ಹೆಣ್ಣುಮಕ್ಕಳಿಗೆ ತೀವ್ರ ಸಮಸ್ಯೆಯಾಗಿದ್ದು, ಶಾಲೆ ಬಿಡಿಸುವ ಪರಿಸ್ಥಿತಿ ಬಂದಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಕ್ಕಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಗ್ರಾಮದ ಮಾರುತಿ,ಬಸವರಾಜ್, ರಾಮಪ್ಪ, ಹುಲಿಗೆಮ್ಮ, ಮುತ್ತಮ್ಮ ಆಗ್ರಹಿಸಿದ್ದಾರೆ.

ಸೋಮವಾರ (ಆ.28) ದಿಂದ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಸಿರಗುಪ್ಪದಿಂದ ಬರುವ ಬಸ್ ಸಿರಿಗೇರಿ ಕ್ರಾಸ್ ಮಾರ್ಗವಾಗಿ ಸಿರಿಗೇರಿ, ನವಗ್ರಾಮ, ಮುದ್ದಟ್ಟನೂರು, ಹಾವಿನಾಳ ಮೂಲಕ ಸಂಚರಿಸಲಿದೆ. ಮರಳಿ ಹಾವಿನಾಳು ಗ್ರಾಮದಿಂದ ಸಿರಗುಪ್ಪಕ್ಕೆ ತೆರಳಲಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು.ತಿರುಮಲೇಶ ಕೆ.ಎಂ.ಡಿಪೋ ಮ್ಯಾನೇಜರ್, ಸಿರಗುಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net