

ಸಿರಿಗೇರಿ: ಸಮಾಜದಲ್ಲಿ ನಮ್ಮ ಪ್ರತಿಭೆ ಪ್ರದರ್ಶಿಸಿದಾಗ ನಮ್ಮ ಸಾಮರ್ಥ್ಯ ತಿಳಿಯಲಿದೆ ಎಂದು ಬಳ್ಳಾರಿಯ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷಾ ಹೇಳಿದರು.
ಸಮೀಪದ ತಾಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಗುರುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಪರಿಶ್ರಮ ಸತತವಾಗಿದ್ದಾಗ ಮಾತ್ರ ಯಶಸ್ಸಿನ ದಡ ತಲುಪಲು ಸಾಧ್ಯ ಎಂದರು. ಮುಖ್ಯಶಿಕ್ಷಕಿ ಗೀತಾ ಸಾಗರ್ ಮಾತನಾಡಿದರು.
ವಿದ್ಯಾರ್ಥಿಗಳಾದ ಎಚ್.ಮಣಿ, ಸಿ.ಪವಿತ್ರಾ, ಕಲಾವತಿ, ಗಿರಿಜಾ, ಉಮಾಮಹೇಶ್ವರಿ, ಶಿವಲಿಂಗ, ಪಲ್ಲವಿ, ಪಾಂಡುರಂಗ, ನಿಖಿತ, ಎನ್.ಬಸವರಾಜ, ಡಿ.ಮುತ್ತಮ್ಮ, ಐಶ್ವರ್ಯ, ಕೆ.ಗಾಯತ್ರಿ, ಶಾಂತಿ ಅವರನ್ನು ಸನ್ಮಾನಿಸಲಾಯಿತು.
ಪಿಡಿಒ ಮಹಮ್ಮದ್ ಖಾದಿರ್, ಶಿಕ್ಷಕರಾದ ಸುಮಿತ್ರಾದೇವಿ, ಶಾಂತಮ್ಮ, ಲಕ್ಷ್ಮೀದೇವಿ ಪ್ರಮುಖರಾದ ಪುರುಷೋತ್ತಮ್ ರೆಡ್ಡಿ, ಜೆ.ಬಸವರಾಜ, ವೆಂಕಟೇಶ, ಕರೀಂ ಸಾಹೇಬ್, ನಾಗರೆಡ್ಡಿ ಇತರರಿದ್ದರು.