ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

Untitled design(10)
ಸಿರಿಗೇರಿಯಲ್ಲಿ ವಲಯ ಮಟ್ಟದ ಕ್ರೀಡಾಕೂಟದ ಧ್ವಜಾರೋಹಣವನ್ನು ಜೆಎಚ್‌ವಿ ಟ್ರಸ್ಟ್ ಅಧ್ಯಕ್ಷ ಜೆ.ಮಲ್ಲಿಕಾರ್ಜುನ ನೆರೆವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಈರಣ್ಣ, ಬಿ.ಚನ್ನಪ್ಪ, ಜೆ.ವಿರೂಪಾಕ್ಷಗೌಡ, ಬಿ.ರಮೇಶ್ ಇತರರಿದ್ದರು.
Published on

ಸಿರಿಗೇರಿ: ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅತ್ಯವಶ್ಯ. ಕ್ರೀಡೆಗಳನ್ನು ಸ್ಪರ್ಧಾತ್ಮಕ ಹಾಗೂ ಆರೋಗ್ಯಕರವಾಗಿ ಎದುರಿಸಬೇಕು. ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವುದು ಎಂದಿ ಜೆಎಚ್‌ವಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜೆ.ಮಲ್ಲಿಕಾರ್ಜುನ ತಿಳಿಸಿದರು.

ಗ್ರಾಮದ ಜೆಎಚ್‌ವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿರಿಗೇರಿ ಮತ್ತು ಮಣ್ಣೂರು ಸೂಗೂರು ವಲಯ ಮಟ್ಟದ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಂಗಳವಾರ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪನ್ನು ಪ್ರಾಮಾಣಿಕ ಮತ್ತು ಜವಾಬ್ದಾರಿಯುತವಾಗಿ ನೀಡಿರುತ್ತಾರೆ. ಆದರೆ, ಕೆಲ ವ್ಯಕ್ತಿಗಳು ಮಧ್ಯ ಪ್ರವೇಶಿಸಿ ಆತಂಕ ಸೃಷ್ಟಿಸುವುದು ಕ್ರೀಡೆಗೆ ಶೋಭೆ ತರುವುದಿಲ್ಲ ಎಂದರು.

ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಬಿ.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಗುಂಡಿಗನೂರು, ದಾಸಪುರ, ಕೊಂಚಿಗೇರಿ, ರುದ್ರ ಪಾದ, ನಡವಿ, ಹಾವಿನಾಳು, ಚನ್ನಪಟ್ಟಣ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

ಇಸಿಒ ಎಚ್.ಪಂಪಾಪತಿ, ಮುಖ್ಯ ಶಿಕ್ಷಕ ವಿರೂಪಾಕ್ಷಿ ಗೌಡ, ಸಿಆರ್‌ಪಿ ಅರುಣ್ ಕುಮಾರ್, ಪ್ರಭುರಾಜ್, ಕೃಷ್ಣ ಮೂರ್ತಿ, ರಾಮಮೂರ್ತಿ, ಉಪೇಂದ್ರ ಕುಮಾರ್, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net