ಮುಂದೆಯೂ ಮೋದಿಯೇ ಮತ್ತೆ ಪ್ರಧಾನಿ

sirigeri-1
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ನಿಮಿತ್ತ ಸಿರಿಗೇರಿಯಲ್ಲಿ ಹುತಾತ್ಮ ಯೋಧ ಮಂಜುನಾಥ ಅವರ ಸ್ಮಾರಕದ ಬಳಿ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಸಿ ನೆಟ್ಟರು. ಗ್ರಾ.ಪಂ.ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ, ಪ್ರಮುಖರಾದ ಎನ್.ವಿರೂಪಾಕ್ಷಪ್ಪ, ಅಂಬರೀಷಗೌಡ, ಡಿ.ಚನ್ನಪ್ಪ, ಬಾಕಟೆ ಈರಯ್ಯ ಇತರರಿದ್ದರು.
Published on

ಸಿರಿಗೇರಿ: ದೇಶದ ಜನತೆಯ ಒಗ್ಗಟ್ಟಿನ ಪ್ರತಿಫಲದಿಂದ ನರೇಂದ್ರ ಮೋದಿ ಅವರು ಮೂರು ಬಾರಿ ಪ್ರಧಾನಮಂತ್ರಿಯಾಗಿ ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಿದ್ದಾರೆ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಗ್ರಾಮ ಘಟಕದಿಂದ ಗ್ರಾಮದ ಹುತಾತ್ಮ ಯೋಧ ಮಂಜುನಾಥ ಅವರ ಸ್ಮಾರಕದ ಬಳಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೋದಿ ಅವರು ಪ್ರಧಾನಿ ಆಗಿದ್ದರಿಂದ ಆರ್ಥಿಕತೆಯಲ್ಲಿ ನಮ್ಮ ದೇಶ ನಾಲ್ಕನೆ ಸ್ಥಾನದಲ್ಲಿದೆ. ಇಂತಹ ಪ್ರಧಾನಮಂತ್ರಿ ದೊರೆತಿರುವುದು ನಮ್ಮೆಲ್ಲರ ಹೆಮ್ಮೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಗ್ರಾ.ಪಂ.ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ, ಪ್ರಮುಖರಾದ ಎನ್.ವಿರೂಪಾಕ್ಷಪ್ಪ, ಅಂಬರೀಷಗೌಡ, ಡಿ.ಚನ್ನಪ್ಪ, ಬಾಕಟೆ ಈರಯ್ಯ, ಹಾಗಲೂರು ಮಲ್ಲನಗೌಡ, ವೀರಭದ್ರಗೌಡ, ಜೆ.ಮಲ್ಲಿಕಾರ್ಜುನ ಗೌಡ, ಬಿ.ಮಲ್ಲಯ್ಯ ನಾಯಕ, ಗುಡಟ್ಟಿ ಈರಣ್ಣ, ಗುಂಡಿಗನೂರು ಪ್ರಕಾಶ್, ವಿ.ಶೇಖರಪ್ಪ, ವಿ.ಹನುಮೇಶ,ಪವಾಡಿ, ರಾಘವೇಂದ್ರ, ಪಂಚಾಕ್ಷರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net