ಸಂಘಟನೆಗಳು ಸಮಾಜಮುಖಿಯಾಗಿರಲಿ: ಸಮಾಜ ಸೇವಕ ರಾಮ್‌ಬಾಬು ಸಲಹೆ

151122 Sirigeri Childrens Day
ಸಿರಿಗೇರಿ ಎಪಿಎಂಸಿ ಆವರಣದಲ್ಲಿ ಮಕ್ಕಳ ದಿನಾಚರಣೆಯನ್ನು ಶಾಲಾ ಮಕ್ಕಳು ಉದ್ಘಾಟಿಸಿದರು.
Published on

ಸಿರಿಗೇರಿ: ಸ್ಥಳೀಯ ಎಪಿಎಂಸಿ ಆವರಣದಲ್ಲಿ ಭಗತ್‌ಸಿಂಗ್ ಯುವಕ ಸಂಘ ಹಾಗೂ ಶಿಕ್ಷಣ ಪ್ರೇಮಿಗಳಿಂದ ಸೋಮವಾರ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾಜ ಸೇವಕ ರಾಮ್‌ಬಾಬು ಮಾತನಾಡಿ, ಮಕ್ಕಳಿಗಾಗಿ ಒಂದು ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಆಯೋಜಿಸಬೇಕೆನ್ನುವ ಆಸೆ ಇದೀಗ ಈಡೇರಿದೆ. ಸಂಘಟನೆಗಳು ನಿರಂತರವಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಬೇಕು ಎಂದರು.

ಸರ್ಕಾರಿ ಬಾಲಕರ ಪ್ರೌಢ ಶಾಲೆಯ ವಿದ್ಯಾರ್ಥಿ ಚಿನ್ಮಯಿ ಪಿ.ಎಂ ಮಾತನಾಡಿ, ಶಾಲೆ ಬಿಟ್ಟ ಮಕ್ಕಳನ್ನು ಹುಡುಕಿ ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು ಎಂದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳಾದ ಮಮತಾ, ಪೂಜಾ ಸಜ್ಜನ್, ಚಂದ್ರಕಲಾ, ತಿರುಮಲ, ತರುಣ್ ಕುಮಾರ್, ಮಲ್ಲಿಕಾರ್ಜುನ ಇತರರಿದ್ದರು.ಗ್ರಾಮದ ಪ್ರೌಢ, ಪ್ರಾಥಮಿಕ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಆಯೋಜಕರಾದ ಶಿಕ್ಷಣ ಪ್ರೇಮಿಗಳಾದ ಹಳ್ಳಿಮರದ ನಾಗರಾಜ, ಅಲೀಂ ಬಾಷಾ, ಶಿವಾಜಿರಾವ್‌ನ್ನು ಸನ್ಮಾನಿಸಲಾಯಿತು.ನಂತರ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net