

ಸಿರಿಗೇರಿ: ಸಮೀಪದ ಸಿದ್ದರಾಂಪುರ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನವಣೆ ಬೆಳೆ ಕ್ಷೇತ್ರೋತ್ಸವ ನಡೆಯಿತು.
ಎನ್‌ಎಫ್‌ಎಎಂ ಯೋಜನೆ ಅಧಿಕಾರಿ ಡಾ.ಪ್ರದೀಪ್ ಕುಮಾರ್ ಶಾ ಮಾತನಾಡಿ, ನವಣೆ ಬೆಳೆಯಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟ ಸಾಧಿಸಬೇಕು. ಅತಿಯಾದ ರಾಸಾಯನಿಕ ಬಳಸದೆ ಸಾವಯವ ಕೃಷಿಗೆ ಆದ್ಯತೆ ನೀಡಿದಲ್ಲಿ ಹೆಚ್ಚಿನ ಉತ್ಪಾದನೆ, ಲಾಭ ಸಿಗಲು ಸಾಧ್ಯವಾಗುತ್ತದೆ. ಭೂಮಿಯ ಫಲವತ್ತತೆಯನ್ನೂ ಕಾಪಾಡಬಹುದು ಎಂದರು.
ಸಿರಿಧಾನ್ಯ ಬೆಳೆಯುವಂತೆ ಹೇಳುವ ಸರ್ಕಾರಗಳು, ಬೆಂಬಲ ಬೆಲೆಯೂ ನೀಡಬೇಕು ಎಂದು ರೈತರು ಮನವಿ ಮಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, ಉಪನಿರ್ದೇಶಕ ಕೆಂಗೇಗೌಡ, ಸಹಾಯಕ ಅಧಿಕಾರಿ ಎಸ್.ಬಿ.ಪಾಟಿಲ್, ಕೃಷಿ ಅಧಿಕಾರಿ ಹೇಮಾನಾಯ್, ಪುರುಷೋತ್ತಮ, ಎಟಿಎಂ ಸಾಯಿಚೇತನ್, ಪ್ರಮುಖರಾದ ಆರ್.ಎಂ.ಶಂಕರಗೌಡ, ದೊಡ್ಡನಗೌಡ ಇತರರಿದ್ದರು.