ನಾಗನಾಥೇಶ್ವರ ರಥೋತ್ಸವ ಸಂಪನ್ನ

ಸಿರಿಗೇರಿಯಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ನಾಗನಥೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಸಿರಿಗೇರಿಯಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ನಾಗನಥೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
Published on

ಸಿರಿಗೇರಿ: ಗ್ರಾಮದ ಆರಾಧ್ಯ ದೈವ ಶ್ರೀ ನಾಗನಥೇಶ್ವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ಜರುಗಿತು.

ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದವು. ರಥೋತ್ಸವಕ್ಕೆ ಕೊಟ್ಟರು ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ನಾಗನಾಥೇಶ್ವರ ದೇಗುಲದ ಆವರಣದಲ್ಲಿ ಸಂಜೆ ವಿಶ್ವಗುರು ಕಲಾ ಟ್ರಸ್ಟ್ ವತಿಯಿಂದ ಸಂಪೂರ್ಣ ರಾಮಾಯಣ, ವಾಲಿ-ಸುಗ್ರೀವ ಕಾಳಗ ಬಯಲಾಟ ಮತ್ತು ನಾಗನಗೌಡ ರಂಗಮಂದಿರದಲ್ಲಿ ‘ಹೆಡೆ ಎತ್ತಿದ ಸರ್ಪಕ್ಕೆ ಗುರಿ ಇಟ್ಟ ಗರುಡ’ ಎಂಬ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು.

ಸಿರಿಗೇರಿ ಶ್ರೀ ನಾಗನಾಥೇಶ್ವರ ಜಾತ್ರೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು. ಸ್ನೇಹ ಬಳಗದ ಪಾಲನೇತ್ರ, ಚೇತನ್, ಪಂಪಗೌಡ , ಪಂಪಾಪತಿ ಗೌಡ, ಶರಣಬಸವ, ನಿರಂಜನ್, ಲಕ್ಷ್ಮೀಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net