ಕೋವಿಡ್‌ಗೆ ಪ್ರಾಚಾರ್ಯ ಬಲಿ

22052021 sirigeri teacher death
Published on

ಸಿರಿಗೇರಿ: ಗ್ರಾಮದ ನಿವಾಸಿ, ಕಂಪ್ಲಿ ತಾಲೂಕು ರಾಮಸಾಗರದ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಕಲ್ಗುಡಿ ವಿರೂಪಾಕ್ಷಿ (41) ಶನಿವಾರ ಕೋವಿಡ್‌ಗೆ ಬಲಿಯಾಗಿದ್ದಾರೆ.

ಮೇ 19ರಂದು ಕರೊನಾ ದೃಢಪಟ್ಟಿತ್ತು. ಶನಿವಾರ ರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಅಸುನೀಗಿದ್ದಾರೆ. ಇವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ, ಒಬ್ಬ ಸಹೋದರ, ಮೂವರು ಸಹೋದರಿಯರು ಇದ್ದಾರೆ. ಸಿರಿಗೇರಿ ಗ್ರಾಮದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net