

ಸಿರಿಗೇರಿ: ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೇ ಮೊಹರಮನ್ನು ಶಾಂತಿಯಿಂದ ಆಚರಿಸಬೇಕು ಎಂದು ಎಎಸ್‌ಐ ಎಸ್.ಎಂ.ಬಾಷಾ ತಿಳಿಸಿದರು.
ಗ್ರಾಮದ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬದ ವೇಳೆ ಸಾರ್ವಜನಿಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ಅನವಶ್ಯ ಗಲಾಟೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದ ಪ್ರಮುಖರು ಪ್ರತಿಕ್ರಿಯಿಸಿ, ಸುಮಾರು ವರ್ಷಗಳಿಂದ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದು-ಮುಸ್ಲಿಮರು ಸಹೋದರರಂತೆ ಆಚರಿಸಿಕೊಂಡು ಬಂದಿದ್ದೇವೆ. ಈ ವರ್ಷವೂ ಭಾವೈಕ್ಯ, ಶಾಂತಿ-ಸೌಹಾರ್ದ, ಯಾವುದೇ ಕೆಟ್ಟ ಚಟುವಟಿಕೆಗಳಿಗೆ ಆಸ್ಪದ ನೀಡದೆ ಹಬ್ಬವನ್ನು ಯಶಸ್ವಿಗೊಳಿಸುವುದಾಗಿ ಹೇಳಿದರು.
ಗ್ರಾಮಸ್ಥರಾದ ಎಸ್.ಎಂ.ಅಡಿವೆಯ್ಯ ಸ್ವಾಮಿ, ಕೆ.ದ್ಯಾವಣ್ಣ, ಡ್ರೈವರ್ ಹುಲುಗಪ್ಪ, ರಾರಾವಿ ವೆಂಕಟೇಶ್, ವಿ.ಹನುಮೇಶ್, ಎಚ್.ಭೀಮೇಶ್, ನೆನಕ್ಕಿ ವಿರೂಪಾಕ್ಷಿ, ಬಿ.ಮಲ್ಲಯ್ಯ, ಗೋಳಿಡೆ ಚನ್ನಪ್ಪ, ವಿ.ರಮೇಶ್, ಹಳ್ಳಿಮರದ ವೀರೇಶ್, ಬೆನ್ನೂರು ಮಹಮ್ಮದ್, ಶೇಕ್ಷಾವಲಿ, ಮಿಲ್ಕ್ ಚಾಂದ್, ಕೊಳ್ಳಿ ಮೂಕಯ್ಯ, ಮೌಲಾಸಾಬ್, ಬಿ.ನಾಗೇಂದ್ರ, ಪೊಲೀಸ್ ಸಿಬ್ಬಂದಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.