ಬಿಳಕಲ್ಲರಾಯ ದೇಗುಲಕ್ಕೆ ಕಲಶಾರೋಹಣ

srg-1
ಮುದ್ದಟನೂರು ಗ್ರಾಮದಲ್ಲಿ ಬಿಳಕಲ್ಲರಾಯ ಆಂಜನೇಯಸ್ವಾಮಿ ದೇಗುಲದ ಕಲಶಾರೋಹಣ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಪುರೋಹಿತ ಶ್ರೀನಿವಾಸ, ಟ್ರಸ್ಟ್ ಅಧ್ಯಕ್ಷ ಮಾರುತಿ ಶೆಟ್ಟಿ , ನಿರ್ದೇಶಕರಾದ ನಾಗಪ್ಪಸ್ವಾಮಿ, ಬಾಲಪ್ಪ, ನಾಗನಗೌಡ ಇತರರಿದ್ದರು.
Published on

ಸಿರಿಗೇರಿ: ಮುದ್ದಟನೂರು ಗ್ರಾಮದಲ್ಲಿ ಬಿಳಕಲ್ಲರಾಯ ಆಂಜನೇಯಸ್ವಾಮಿ ದೇಗುಲದ ಗೋಪುರಕ್ಕೆ ಆರ್ಯವೈಶ್ಯ ಸಮಾಜ ಮತ್ತು ಶ್ರೀ ಬೆಳಕಲ್ಲರಾಯ ದೇವಸ್ಥಾನ ಟ್ರಸ್ಟ್‌ನಿಂದ ಇತ್ತೀಚೆಗೆ ಕಲಶಾರೋಹಣ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ಪುರೋಹಿತ ಶ್ರೀನಿವಾಸ ಆಚಾರ್ಯ ನೇತೃತ್ವದಲ್ಲಿ ಶ್ರೀ ಗಣಪತಿ ಹೋಮ, ನವಗ್ರಹ ಹೋಮ, ಪವಮಾನ ಹೋಮ, ಬ್ರಹ್ಮಾದಿ ಮಂಡಲ ಹೋಮ ನೆರವೇರಿತು. ನಂತರ ಗಂಗೆಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ ಮಹಿಳೆಯರ ಪೂರ್ಣಕುಂಭ-ಕಳಸ, ವೀರಗಾಸೆ, ಡೊಳ್ಳು ಮೇಳದೊಂದಿಗೆ ಅದ್ದೂರಿ ಮೆರವಣಿಗೆ ಸಾಗಿತು.

ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಾರುತಿ ಶೆಟ್ಟಿ, ನಿರ್ದೇಶಕರಾದ ನಾಗಪ್ಪ ಸ್ವಾಮಿ, ಬಾಲಪ್ಪ, ನಾಗನಗೌಡ, ದೇವೇಂದ್ರಪ್ಪ ಶೆಟ್ಟಿ, ಕೆ.ಎಸ್.ಮಂಗಳೇಶ್ ಶೆಟ್ಟಿ, ವೀರನಗೌಡ, ಹನುಮಂತಯ್ಯ, ಜಗನ್ನಾಥ, ಸಾಲಗುಂದಿ ಬಸವರಾಜ, ಹೊಸೂರಪ್ಪ, ಹರಿಜನ ಶೇಕ್ರಪ್ಪ, ಸಿರಿಗೇರಿ ಹಾಗೂ ಮುದ್ದಟನೂರು ಭಕ್ತರು ಇದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net