

ಸಿರಿಗೇರಿ: ನಿರ್ಗತಿಕರು, ಅಶಕ್ತರು ಹಾಗೂ ಅಂಗವಿಕಲರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಸಾಶನ ನೀಡುತ್ತಿದ್ದು, ಇದರಿಂದ ಜೀವನ ನಿರ್ವಹಣೆಗೆ ಅನುಕೂಲವಾಗುತ್ತಿದೆ ಎಂದು ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ತಿಳಿಸಿದರು.
ಕರೂರು ಗ್ರಾಮದ ಲಕ್ಷ್ಮೀದೇವಮ್ಮ ಮತ್ತು ರಾಚಮ್ಮಗೆ ಬುಧವಾರ ಮಾಸಾಶನ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು. ಸಿರಗುಪ್ಪ ತಾಲೂಕಿನಲ್ಲಿ 69 ಫಲಾನುಭವಿಗಳಿಗೆ ಮಾಸಾಶನ ವಿತರಿಸಲಾಗಿದ್ದು, ವಾರ್ಷಿಕ 8.30 ಲಕ್ಷ ರೂ. ವ್ಯಯಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಮುಖರಾದ ಜಗನ್ನಾಥ ರೆಡ್ಡಿ, ಶೇಖರ್‌ಗೌಡ, ಬಿ.ಎಂ.ರೆಡ್ಡಿ, ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.