

ಸಿರಿಗೇರಿ: ಗ್ರಾಮದ ಆರಾಧ್ಯ ದೇವಿ ಮಾರೆಮ್ಮಗೆ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ಅರ್ಚಕ ಬಿ.ಸಿದ್ದೇಶ್ ವಿಶ್ವಕರ್ಮ ಗಂಗೆಸ್ಥಳದಿಂದ ಮಡಿ ಬಿಂದಿಗೆಯಲ್ಲಿ ನೀರು ತಂದು ಗ್ರಾಮದ ಸೋಮಪ್ಪನ ದೇವಸ್ಥಾನದ ಹತ್ತಿರ ಇರಿಸಿ, ದೇವಿ ಮೂರ್ತಿಗೆ ಹೂವಿನ ಮಾಲೆ ಹಾಕಿ, ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ದೇವಿ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ತಲುಪಿತು. ಭಕ್ತರು ಹೂ, ಹಣ್ಣು, ಕಾಯಿ ಜತೆಗೆ ದೇವಿಗೆ ಹೋಳಿಗೆ ನೈವೇದ್ಯ ಅರ್ಪಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.