ಮಕಾಡೆ ಮಲಗಿದ ಭತ್ತದ ಬೆಳೆ

Sirigeri Paddy Loss
ಸಿರಿಗೇರಿ ಸಮೀಪದ ದರೂರು ಗ್ರಾಮದಲ್ಲಿ ನಿರಂತರ ಮಳೆಯಿಂದ ಭತ್ತದ ಬೆಳೆ ನೆಲಕಚ್ಚಿರುವುದು.
Published on

ಸಿರಿಗೇರಿ: ಧಾರಾಕಾರ ಮಳೆಯಿಂದ ಸಿರಿಗೇರಿ ಹಾಗೂ ಕರೂರು ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಬೆಳೆ ನೆಲಕಚ್ಚಿದ್ದು, ರೈತರು ಆತಂಕಗೊಂಡಿದ್ದಾರೆ.

ಸಿರಿಗೇರಿ ವ್ಯಾಪ್ತಿಯ ನಿಟ್ಟೂರು, ರುದ್ರಪಾದ, ನಡವಿ, ಉಡುಗೋಳ, ದೇವಿನಗರ, ಬಲಕುಂದಿ ಹಾಗೂ ಕರೂರು ಹೋಬಳಿ ವ್ಯಾಪ್ತಿಯ ದರೂರು, ಎಚ್. ಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆದಿರುವ ಆರ್‌ಎನ್‌ಆರ್ ಭತ್ತ ಗಾಳಿ-ಮಳೆಗೆ ನೆಲಕ್ಕೊರಗಿದೆ.

ಬಹುತೇಕ ಕಡೆ ಭತ್ತದ ಬೆಳೆ ಸಂಪೂರ್ಣ ಒಣಗಿ ಕಟಾವು ಹಂತಕ್ಕೆ ಬಂದಿತ್ತು. ದೀಪಾವಳಿ ನಂತರ ಕೊಯ್ಲು ಮಾಡಲು ರೈತರು ಯೋಜಿಸಿದ್ದರು. ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭತ್ತ ಮಕಾಡೆ ಮಲಗಿದೆ. ಅಲ್ಲದೆ ಹಸಿ ಮೆಣಸಿನಕಾಯಿ ಹಾಗೂ ಹತ್ತಿ ಬೆಳೆದ ರೈತರೂ ನಷ್ಟದ ಆತಂಕದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net