ಪೌರಾಣಿಕ ಕಥೆಗಳ ತಿರುಳು ಅರಿತು ಬಾಳುವುದು ಅಗತ್ಯ

270422 Konchageri Veera Abhimanyu Doddata
ಸಿರಿಗೇರಿ ಸಮೀಪದ ಕೊಂಚಿಗೇರಿಯಲ್ಲಿ ಪ್ರದರ್ಶನಗೊಂಡ ವೀರ ಅಭಿಮನ್ಯು ಕಾಳಗ ದೊಡ್ಡಾಟದ ದೃಶ್ಯ.
Published on

ಸಿರಿಗೇರಿ: ಸಮೀಪದ ಕೊಂಚಿಗೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ, ತ್ರಿವಿಧ ದಾಸೋಹಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಂದಿಹಾಳು ಇವರ ಆಶ್ರಯದಲ್ಲಿ ‘ವೀರ ಅಭಿಮನ್ಯು ಕಾಳಗ ದೊಡ್ಡಾಟ ಪ್ರದರ್ಶನಗೊಂಡಿತು.

ಗ್ರಾಮದ ಮುಖಂಡ ಕರ್ಣಂ ಸಿದ್ದನಗೌಡ ಮಾತನಾಡಿ, ಪೌರಾಣಿಕ ನಾಟಕ, ದೊಡ್ಡಾಟಗಳನ್ನು ನೋಡುವುದೇ ಚಂದ. ಅವುಗಳ ಅಭಿನಯವನ್ನು ಪಾತ್ರದಲ್ಲಿ ನೋಡುವುದಂತೂ ಮನಮೋಹಕ. ಇಂತಹ ಕಲಾ ಪ್ರದರ್ಶನ ಡಿಜಿಟಲ್ ಯುಗದಲ್ಲೂ ಕಾಣ ಸಿಗುತ್ತಿರುವುದು ನಮ್ಮ ಸೌಭಾಗ್ಯ. ಪೌರಾಣಿಕ ಕಥೆಗಳ ತಿರುಳು ಅರಿತು ಬಾಳುವುದು ಇಂದಿನ ಅಗತ್ಯ ಎಂದರು.

ಹಾರ್ಮೋನಿಯಂ ಕಲಾವಿದ ಎಚ್. ತಿಪ್ಪೇಸ್ವಾಮಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೊಡ್ಡಾಟ, ಬಯಲಾಟ ಇತರ ರಂಗಭೂಮಿ ಕಲೆಗಳ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನಾರ್ಹ. ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳು ಹಿರಿಕರ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಶಿವಪ್ಪ ತಾತಾ ದೊಡ್ಡಾಟ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶರಣಯ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ, ಮುಖಂಡರಾದ ಕರ್ಣಂ ಸಿದ್ದನಗೌಡ, ಕೋರಿ ಕರಿಬಸಪ್ಪ, ಅರಳಯ್ಯಕಲ್ ಮಲ್ಲನಗೌಡ, ಗ್ರಾಪಂ .ಸದಸ್ಯರು, ಹಾರ್ಮೋನಿಯಂ ವಾದಕ ಎಚ್. ಶಿವರುದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net