ಶಿಕ್ಷಣ ವ್ಯವಸ್ಥೆಯಲ್ಲಿ ಮಾಯವಾದ ಶಿಸ್ತು

Untitled design(11)
ಕರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2003ರ 10ನೇ ತರಗತಿ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಅಂಗವಾಗಿ ಶಿಕ್ಷಕರ ಮೆರವಣಿಗೆ ನಡೆಯಿತು.
Published on

ಸಿರಿಗೇರಿ: ಹಿಂದಿನ ಕಾಲದಲ್ಲಿ ಶಿಕ್ಷಣ ಗುಣಮಟ್ಟ ಎಂಬುದು ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಭಾವನಾತ್ಮಕ ಸಂಬಂಧವಾಗಿತ್ತು. ವಿದ್ಯಾರ್ಥಿಗಳನ್ನು ಶಿಕ್ಷಿಸಿ ಬುದ್ಧಿ ಹೇಳುವ ಸಮಯವಾಗಿತ್ತು. ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಶಿಸ್ತು-ಸಂಯಮ ಕಳೆದುಹೋಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಶ್ರೀಕಂಠೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.

ಕರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2003ರ 10ನೇ ತರಗತಿ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರಾದ ಜೋಶಿ, ರಫೀಕ್ ಅಹಮದ್ ಖವಾಸ್ ಮಾತನಾಡಿ, ತುಂಟಾಟದ ನಡುವೆ ಓದು-ಬರಹ ಇತರ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ಪ್ರೇರೇಪಣೆ ನೀಡುವವರೇ ನಿಜವಾದ ಶಿಕ್ಷಕ ಎಂದರು. ಶಿಕ್ಷಕರನ್ನು ಬೆಳ್ಳಿರಥದಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ನಂತರ ಪಾದಪೂಜೆ ಮಾಡಿ ಗೌರವಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಶ್ರೀನಾಥ್ ಶೆಟ್ಟಿ, ವಿರೂಪಾಕ್ಷಿ, ಶೇಖಣ್ಣ, ಕಟ್ಟೆ ಬಸವ, ಹೊನ್ನೂರು ನಾಯಕ, ಮರಿಸ್ವಾಮಿ, ಗಂಗಮ್ಮ, ಸರಸ್ವತಿ, ನಾಗಲಕ್ಷ್ಮೀ, ಶಾಂತಿ, ಮುಖ್ಯ ಶಿಕ್ಷಕಿ ಭಾಗ್ಯಮ್ಮ, ಶಿಕ್ಷಕರಾದ ಟಿ.ಶ್ರೀಕಂಠಯ್ಯ, ಜೋಶಿ, ಪರಶುರಾಮ್, ಆಜಾದ್, ಜಯಶ್ರೀ, ಮಲ್ಲಿಕಾರ್ಜುನ, ಶಿವಪ್ಪ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net