ಮಾತಿನಿಂದ ಗೌರವಕ್ಕೆ ಚ್ಯುತಿ ಬಾರದಿರಲಿ

Sirigeri Karnataka Political Academy
ಸಿರಿಗೇರಿಯಲ್ಲಿ ಕರ್ನಾಟಕ ರಾಜಕೀಯ ಅಕಾಡೆಮಿಯಿಂದ ಆಯೋಜಿಸಿದ್ದ ‘ಸದನದ ಭಾಷೆ ಮತ್ತು ನಡವಳಿಕೆ’ ಕುರಿತ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಸ್ನೇಹ ಸಂಪುಟದ ಕಲ್ಲುಕಂಭ ಪಂಪಾಪತಿ, ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ.ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ ಇತರರಿದ್ದರು.
Published on

ಸಿರಿಗೇರಿ: ರಾಜಕೀಯ ಜನಸೇವೆಗಿರುವ ಅವಕಾಶವಾಗಿದ್ದು, ಸದನದಲ್ಲಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದ ಶಂಭುಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಕರ್ನಾಟಕ ರಾಜಕೀಯ ಅಕಾಡೆಮಿಯಿಂದ ಭಾನುವಾರ ಆಯೋಜಿಸಿದ್ದ ‘ಸದನದ ಭಾಷೆ ಮತ್ತು ನಡವಳಿಕೆ ಒಂದು ಚರ್ಚೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಡಳಿತದಲ್ಲಿ ಸಂವೇದನೆ, ಚಿಂತನಾಶೀಲರು ಇಲ್ಲದಂತಾಗಿದೆ. ಸದನ ಒಂದು ಕುಟುಂಬವಿದ್ದಂತೆ, ಭಾಷೆ ಸುಲಲಿತವಾಗಿರಬೇಕು. ಪಕ್ಷದ ಕುರಿತು, ವ್ಯಕ್ತಿಗೆ ಚ್ಯುತಿಯಾಗುವಂತೆ ಮಾತನಾಡಬಾರದು ಎಂದರು.

ಕರ್ನಾಟಕ ರಾಜಕೀಯ ಅಕಾಡೆಮಿ ಗೌರವಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಮಾತನಾಡಿ, ಪ್ರಾಮಾಣಿಕ ನಾಯಕರಿಗೆ ಸ್ಥಾನ ದೊರಕುವುದಿಲ್ಲ. ಲಾಭಕ್ಕಾಗಿ ರಾಜಕೀಯ ಮಾಡುವುದಕ್ಕಿಂತ ಜನಮನ ಗೆಲ್ಲುವುದು ಮುಖ್ಯ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ.ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ, ಸ್ನೇಹ ಸಂಪುಟದ ಕಲ್ಲುಕಂಭ ಪಂಪಾಪತಿ, ಶಂಭುಲಿಂಗೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷ ಹೂಗಾರ ಬಸವರಾಜ, ನಿಮಗಾಗಿ ನಾವು ಸಂಸ್ಥೆ ಅಧ್ಯಕ್ಷ ಕೊಳ್ಳಿ ಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net