ಶಿಲಾಯುಗದ ಗೂಳಿ ಛಾಯಾಚಿತ್ರಗಳು ಪತ್ತೆ

Sirigeri Jinke gudda
ಕುರುಗೋಡು ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿನ ಜಿಂಕೆ ಗುಡ್ಡದ ಎದುರಗಡೆಯ ಬೆಟ್ಟದಲ್ಲಿ ಪತ್ತೆಯಾದ ಶಿಲಾಯುಗದ ಗೂಳಿಗಳ ಪೂರ್ಣಛಾಯಾಚಿತ್ರ.
Published on

ಸಿರಿಗೇರಿ: ಕುರುಗೋಡು ತಾಲೂಕಿನ ಮುಷ್ಟಗಟ್ಟೆ ರಸ್ತೆಯಲ್ಲಿರುವ ಜಿಂಕೆ ಗುಡ್ಡದ ಎದುರಗಡೆಯ ಬೆಟ್ಟದ ತುದಿಯಲ್ಲಿ ಶಿಲಾಯುಗದ ಏಳು ಗೂಳಿಗಳ ಪೂರ್ಣಛಾಯಾಚಿತ್ರಗಳನ್ನು ಸಂಶೋಧಕ ಕೆ.ವೀರಭದ್ರಗೌಡ ಪತ್ತೆ ಹಚ್ಚಿದ್ದಾರೆ.

ಈಗಾಗಲೇ ಅನೇಕ ಇತಿಹಾಸಕಾರರು ಶಿಲಾಯುಗದ ಮಾನವನ ನೆಲೆ, ಕುಟ್ಟಿದ-ಕಲ್ಲಾಸರೆಗಳಲ್ಲಿನ ರೇಖಾಚಿತ್ರಗಳನ್ನು ಶೋಧಿಸಿದ್ದಾರೆ. ಆದರೆ ಈ ಬೆಟ್ಟದಲ್ಲಿನ ಆದಿಮಾನವ ಕುಟ್ಟಿರುವ ಗೂಳಿಗಳ ಪೂರ್ಣಛಾಯಾಚಿತ್ರಗಳು ವಿಶೇಷವಾಗಿವೆ. ಕೆ.ವೀರಭದ್ರಗೌಡ ಸ್ನೇಹಿತ ಸೂರಿ ಅವರ ಜತೆಗೆ ಬೆಟ್ಟದಲ್ಲಿ ಶೋಧನೆ ನಡೆಸಿದಾಗ ಗೂಳಿಯ ಚಿತ್ರಗಳು ಪತ್ತೆಯಾಗಿವೆ. ಬೆಟ್ಟದಲ್ಲಿ ಪೂರ್ವಾಭಿಮುಖವಾಗಿರುವ ಬೃಹತ್ ಬಂಡೆ ಕಲ್ಲಿನಲ್ಲಿ ಶಿಲಾಯುಗದ ಮಾನವರು ಏಳು ಗೂಳಿ ಛಾಯಾಚಿತ್ರಗಳ ಮೂಲಕ ತನ್ನ ಭಾವನೆಗಳನ್ನು ಅಭಿವ್ಯಕ್ತಿಸಿದ್ದು, ಅವರ ಕಲಾ ನೈಪುಣ್ಯತೆಯನ್ನು ಕಾಣಬಹುದು. ಅಲ್ಲದೆ ಬಹಳಷ್ಟು ವರ್ಷಗಳ ಕಾಲ ಶಿಲಾಯುಗದ ಮಾನವರು ಇಲ್ಲಿ ನೆಲೆಯೂರಿದ್ದರು ಎಂಬುದು ತಿಳಿಯುತ್ತದೆ ಎಂದು ಕೆ.ವೀರಭದ್ರಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net