ಸದನದಲ್ಲಿ ನ್ಯಾಯಯುತ ಚರ್ಚೆಗಳಾಗಲಿ

Sirigeri brpatil
ಸಿರಿಗೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮತ್ತು ಕಾನೂನು ವಿಚಾರ ಸಂಕಿರಣದಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿದರು. ಪ್ರಮುಖರಾದ ಸಿರಿಗೇರಿ ಯರಿಸ್ವಾಮಿ, ಹೂಗಾರ್ ಬಸವರಾಜ್, ಮಾಧವ ರೆಡ್ಡಿ ಇದ್ದರು.
Published on

ಸಿರಿಗೇರಿ: ಸಂವಿಧಾನ ಮತ್ತು ಕಾನೂನು ವ್ಯವಸ್ಥೆ ಸರಿಯಾಗಿದೆ. ಆದರೆ ಅಧಿಕಾರಿಗಳು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಕರ್ನಾಟಕ ರಾಜಕೀಯ ಅಕಾಡೆಮಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮತ್ತು ಕಾನೂನು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸಂಸತ್ ಹಾಗೂ ವಿಧಾನಮಂಡಲ ಅಧಿವೇಶನಗಳು ಎಲ್ಲರ ಹಾಜರಾತಿಯೊಂದಿಗೆ ಕನಿಷ್ಠ ನೂರು ದಿನಗಳಾದರೂ ನಡೆಯಬೇಕು. ಆದರೆ, ಅದಾಗುತ್ತಿಲ್ಲ. ಅಲ್ಲದೆ ನ್ಯಾಯಯುತವಾದ ಚರ್ಚೆಗಳು ನಡೆಯುತ್ತಿಲ್ಲ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ದುಡ್ಡು ಇದ್ದವ ಅಧಿಕಾರದಲ್ಲಿ ಮೆರೆಯುತ್ತಿದ್ದಾನೆ. ಪ್ರಾಮಾಣಿಕ ವ್ಯಕ್ತಿ ಹೊರಗಡೆ ಇದ್ದಾನೆ ಎಂದ ಅವರು, ಗ್ರಾಮಸಭೆಗಳಲ್ಲೂ ಪ್ರಮುಖ ವಿಷಯಗಳು ಚರ್ಚೆಯಾಗಿ ಕಾರ್ಯರೂಪಕ್ಕೆ ಬರಬೇಕು ಎಂದರು.

ಡಾ.ಅಂಬೇಡ್ಕರ್ ಅವರು ಒಂದೇ ಜಾತಿಗೆ ಸೀಮಿತವಾಗಿಲ್ಲ. ಸರ್ವರಿಗೂ ಹಂಚಿದ್ದಾರೆ. ನಿರ್ಗತಿಕರನ್ನು ಎಂದಿಗೂ ಕಡೆಗಣಿಸದೆ ಸ್ಥಳೀಯ ಆಡಳಿತಗಳು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ಅಕಾಡೆಮಿ ಗೌರವಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಮಾತನಾಡಿದರು. ರಾಜ್ಯ ರೈತ ಮತ್ತು ಹಸಿರು ಸೇನೆ ಸಂಘದ ಅಧ್ಯಕ್ಷ ಮಾಧವರೆಡ್ಡಿ, ಶಂಭುಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಹೂಗಾರ್ ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net