ಗುಂಡಿಯಲ್ಲಿ ಬಿದ್ದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ

240322 Sirigeri Distribution of compensation check
ಸೆಪ್ಟೆಂಬರ್ 2ರಂದು ಕುಂಬಾರ ತಿಪ್ಪೇಶ್‌ನ ಮಕ್ಕಳಾದ ಮೌನೇಶ್, ರವಿ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಹಿನ್ನೆಲೆ ಬಿಇಒ ಪಿ.ಡಿ.ಭಜಂತ್ರಿ 2 ಲಕ್ಷ ರೂ. ಚೆಕ್ ಅನ್ನು ಕುಟುಂಬಕ್ಕೆ ನೀಡಿದರು.
Published on

ಸಿರಿಗೇರಿ: ಗುಂಡಿಯಲ್ಲಿ ಬಿದ್ದು ಮೃತಪಟ್ಟ ಮಕ್ಕಳ ಪಾಲಕರಿಗೆ ಬಿಇಒ ಪಿ.ಡಿ.ಭಜಂತ್ರಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ 2 ಲಕ್ಷ ರೂ. ಪರಿಹಾರದ ಚೆಕ್‌ಅನ್ನು ಗುರುವಾರ ನೀಡಿದರು.

ಗ್ರಾಮದ ಬಸವನಪೇಟೆಯ ಕುಂಬಾರ ತಿಪ್ಪೇಶ್ ಅವರ ಇಬ್ಬರು ಮಕ್ಕಳಾದ ಮೌನೇಶ್ ಮತ್ತು ರವಿ ಸೆಪ್ಟೆಂಬರ್ 2 ರಂದು ನೀರಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದರು. ಈ ವೇಳೆ ಮಾತನಾಡಿದ ಬಿಇಒ, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಪಾಲಕರು ಮಕ್ಕಳ ಸುರಕ್ಷತೆ ಕಡೆಗೆ ಕಾಳಜಿ ವಹಿಸಬೇಕು ಎಂದರು.

ವಕೀಲ ರಾಮ್‌ಬಾಬು ಮಾತನಾಡಿದರು. ವಂದೇಮಾತರಂ ಸಂಘದಿಂದ ತಿಪ್ಪೇಶ್ ಅವರ ಕೊನೆ ಮಗು ಸುರೇಶ್‌ಗೆ ಶಿಕ್ಷಣ ಕೊಡಿಸಲು ಮುಂದಾಗುವುದಾಗಿ ತಿಳಿಸಿತು. ಪ್ರಮುಖರಾದ ಸೋಮಪ್ಪ, ಲಕ್ಷ್ಮಣ್ ಭಂಡಾರಿ, ಸದ್ದಾಂ ಹುಸೇನ್, ಪೊಲೀಸ್ ಸಿಬ್ಬಂದಿ ಕೋರಿ ಬಸವರಾಜ್ ಚಿಕ್ಕಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net