ಪಕ್ಷಿಗಳಿಗೆ ನೀರಿನ ವ್ಯವಸ್ಥೆ

ಸಿರಿಗೇರಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೇಮಾವತಿ ಅಮ್ಮ ಅವರ ಜನ್ಮದಿನದ ಪ್ರಯುಕ್ತ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಯಿತು.
ಸಿರಿಗೇರಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೇಮಾವತಿ ಅಮ್ಮ ಅವರ ಜನ್ಮದಿನದ ಪ್ರಯುಕ್ತ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಯಿತು.
Published on

ಸಿರಿಗೇರಿ: ಮಾತೋಶ್ರೀ ಹೇಮಾವತಿ ಅಮ್ಮ ಅವರ ಜನ್ಮದಿನದ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬೆಳ್ಳಿಚುಕ್ಕಿ ಕೇಂದ್ರ ಸಂಘದ ಸದಸ್ಯರು ಗ್ರಾಮದ ವಿವಿಧೆಡೆ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿದರು.

ಜ್ಞಾನವಿಕಾಸ ಸಮನ್ವಯ ಸಮಿತಿ ಅಧಿಕಾರಿ ಪ್ರಿಯಾ ಮಾತನಾಡಿ, ನೀರಿನ ಮಹತ್ವ, ಸ್ವಚ್ಛ ಕುಡಿವ ನೀರಿನ ಲಭ್ಯತೆ ಮತ್ತು ನೈರ್ಮಲ್ಯ, ನೀರಿನ ಸಂಪನ್ಮೂಲಗಳ ರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆ, ಅಂತರ್ಜಲ ಮರುಪೂರ್ಣದ ಮಹತ್ವ ಹಾಗೂ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ನೀರಿನ ಉಳಿತಾಯದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಗಿಡಗಳಲ್ಲಿ ತೂಗುಪಾತ್ರೆ, ಬಾಟಲ್‌ಗಳನ್ನು ಕಟ್ಟಿ ನೀರು ಹಾಕಲಾಯಿತು. ವಲಯ ಮೇಲ್ವಿಚಾರಕ ಹನುಮಂತ, ಸೇವಾ ಪ್ರತಿನಿಧಿ ಪಾರ್ವತಿ, ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net