ಗ್ರಾಪಂ ಮಳಿಗೆಗಳ ದುರಸ್ತಿಗೆ ಕ್ರಮ

sirigeri photo
ಸಿರಿಗೇರಿಯಲ್ಲಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಪಿಡಿಒ ಎಂ.ಹುಸೇನ್ ಪೀರಸಾಬ್ ಮಾತನಾಡಿದರು. ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ.ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ, ಕಾರ್ಯದರ್ಶಿ ಸಿದ್ಧರಾಮ ಇದ್ದರು.
Published on

ಸಿರಿಗೇರಿ: ಗ್ರಾಮ ಪಂಚಾಯಿತಿಯ 16 ಮಳಿಗೆಗಳು ದುಸ್ಥಿತಿಯಲ್ಲಿದ್ದು, ಶೀಘ್ರವೇ ದುರಸ್ತಿ ಮಾಡಿಸಿ ಮಳಿಗೆದಾರರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಪಿಡಿಒ ಎಂ.ಹುಸೇನ್ ಪೀರಸಾಬ್ ಹೇಳಿದರು.

ಗ್ರಾ.ಪಂ. ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಒಂದನೇ ವಾರ್ಡ್‌ನ ಬಸವನಪೇಟೆ ಏರಿಯಾದ ಜೆಎಚ್‌ವಿ ಶಾಲೆ ಪಕ್ಕದಲ್ಲಿ ರಸ್ತೆ ನಿರ್ಮಿಸಲು, ಛಲುವಾದಿ ಸಮುದಾಯ ಭವನ ನಿರ್ಮಿಸಲು ಕೆರಕೋಡಿಯಲ್ಲಿ ಜಾಗ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಗ್ರಾ.ಪಂ. ನೀರುಗಂಟಿ ಹುಲುಗಪ್ಪ ಹಾಗೂ ಕಂಪ್ಯೂಟರ್ ಆಪರೇಟರ್ ಲೋಕೇಶ್ ಅವರನ್ನು ಬಡ್ತಿ ಮಾಡಲು ಅನುಮೋದನೆ ಕೋರಿ ಜಿಪಂಗೆ ಪತ್ರ ಕಳಿಸಲು ಗ್ರಾ.ಪಂ. ಸದಸ್ಯರು ಒಪ್ಪಿಗೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ.ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ, ಕಾರ್ಯದರ್ಶಿ ಸಿದ್ಧರಾಮ, ಸದಸ್ಯರಾದ ಎಸ್.ಎಂ.ಅಡಿವೆಯ್ಯಸ್ವಾಮಿ, ಗುಡಟ್ಟಿ ಈರಣ್ಣ, ಬಿ.ಹನುಮಂತ, ಗೋಡೆ ಚಿನ್ನಪ್ಪ, ಶಿವಮ್ಮ, ಕರಿಬಸಪ್ಪ, ಲಕ್ಷ್ಮಮ್ಮ, ಕೆಂಚಮ್ಮ, ನೀಲಮ್ಮ, ಅನುರಾಧ, ಸ್ನೇಹಲತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net