

ಸಿರಿಗೇರಿ: ಸಮರ್ಪಕ ಕುಡಿವ ನೀರು ಪೂರೈಕೆಗೆ ಆಗ್ರಹಿಸಿ 1 ನೇ ವಾರ್ಡ್‌ನ ಹಳೇ ಹರಿಜನ ಕೇರಿ ನಿವಾಸಿಗಳು ಗ್ರಾಪಂ ಕಚೇರಿ ಮುಂದೆ ಗುರುವಾರ ಖಾಲಿ ಕೊಡಗಳ ಹಿಡಿದು ಪ್ರತಿಭಟನೆ ನಡೆಸಿದರು.
ಹತ್ತು ದಿನಗಳಿಂದ ನೀರು ಪೂರೈಕೆ ಮಾಡಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ. ಗ್ರಾಪಂ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಗ್ರಾಮದ ಆಯಾ ವಾರ್ಡ್‌ಗಳಿಗೆ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಕೆಲವೆಡೆ ನೀರು ಪೋಲಾಗುತ್ತಿದ್ದರೂ ಗಮನಹರಿಸುತ್ತಿಲ್ಲ. ಕೂಡಲೇ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಕೆ.ದ್ಯಾವಣ್ಣ, ಡ್ರೈವರ್ ಹುಲುಗಪ್ಪ, ಭಜಂತ್ರಿ ರಮೇಶ್, ದುರುಗಮ್ಮ, ಕಲ್ಲಮ್ಮ, ದಮ್ಮೂರು ಲಕ್ಷ್ಮೀ, ಹನುಮಂತಮ್ಮ, ಹುಲಿಗೆಮ್ಮ, ತಿಪ್ಪೇಸ್ವಾಮಿ, ಸಣ್ಣ ಮಂಜು, ಶೇಖರ್, ಬಸವ, ಹುಸೇನಿ ಇದ್ದರು.