ಶಿಕ್ಷಕರು ಶ್ರಮಜೀವಿಗಳಿದ್ದಂತೆ; ಜೆಎಚ್‌ವಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಜೆ.ದೊಡ್ಡನಗೌಡ್ರು ಗುಣಗಾನ

06092022 sirigeri teachers day
Published on

ಸಿರಿಗೇರಿ: ತಮ್ಮ ಕಷ್ಟ-ಸುಖ ಬದಿಗೊತ್ತಿ ವಿದ್ಯಾರ್ಥಿಗಳಿಗಾಗಿ ದುಡಿಯುವ ಶಿಕ್ಷಕರು ಶ್ರಮಜೀವಿಗಳಿದ್ದಂತೆ ಎಂದು ಜೆಎಚ್‌ವಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಜೆ.ದೊಡ್ಡನಗೌಡ್ರು ಬಣ್ಣಿಸಿದರು.

ಶಾಲಾವರಣದಲ್ಲಿ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನಿಮಿತ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಶ್ತು ಬದ್ಧ ಪಾಠ ಬೋಧನೆ, ಚಟುವಟಿಕೆ ಆಧಾರಿತ ಬೋಧನೆ, ನಗಿಸಿ ಹೇಳುವುದು, ಕಥೆ ಹೇಳಿ ಗಮನ ಸೆಳೆಯುವುದು ಮೊದಲಾದ ಸೃಜನಶೀಲತೆ ಶಿಕ್ಷಕರಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಗುರು ಹಿರಿಯರು ಹೇಳಿದ ಮಾತನ್ನು ಕೇಳಿ, ಅವರನ್ನು ಗೌರವಿಸಿ, ಉತ್ತಮ ಮೌಲ್ಯಗಳ ಅಳವಡಿಸಿಕೊಂಡು ಮುಂದೆ ಬರಬೇಕು ಎಂದರು.

ಶಿಕ್ಷಕರಿಗಾಗಿ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು. ಜಯಿಸಿದ ಶಿಕ್ಷಕಿಯರಾದ ಪುಷ್ಪಾವತಿ, ಶಿಲ್ಪಾ, ಜೆ.ವಿರೂಪಾಕ್ಷಗೌಡ, ವಿ.ನಾಗರತ್ನ, ಹನುಮೇಶ್.ಕೆ, ವಿಜಯಲಕ್ಷ್ಮೀ, ಪ್ರಶಾಂತ್‌ಪೂಜಾರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಗಳಿಗೆ ಪ್ರಶಸ್ತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net