ಸಿತಾಪರಣ ನಾಟಕ ಪ್ರದರ್ಶನ

31 sirigeri 02march ph
Published on

ಸಿರಿಗೇರಿ: ಸಮೀಪದ ದಾಸಾಪುರದಲ್ಲಿ ಕೇಂದ್ರೀಯ ಸಚಿವಾಲಯ ಮತ್ತು ಧಾತ್ರಿರಂಗ ಸಂಸ್ಥೆಯಿಂದ ಸಿತಾಪರಣ ನಾಟಕ ಪ್ರದರ್ಶನಗೊಂಡಿತು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಧಾತ್ರಿ ರಂಗಸಂಸ್ಥೆ ಕಾರ್ಯದರ್ಶಿ ವೈ. ಮಂಜುನಾಥ, ಬಯಲಾಟ, ಸಾಮಾಜಿಕ ಹಾಗೂ ಪೌರಾಣಿ ನಾಟಕಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಅಭ್ಯಾಸಿಸಬೇಕು. ಬೇಕಿದ್ದರೆ ಧಾತ್ರಿ ರಂಗ ಸಂಸ್ಥೆಯಲ್ಲಿ ಪ್ರವೇಶ ಪಡೆದು ತರಬೇತಿ ಪಡೆದುಕೊಳ್ಳಬಹುದು ಎಂದರು.

ಗ್ರಾಮದ ಮುಖಂಡರಾದ ಹನುಮಂತಪ್ಪ, ಟಿ.ಚಂದ್ರಪ್ಪ, ಹಳ್ಳಿ ಬಸವರಾಜ್, ರುದ್ರಪ್ಪ, ದೊಡ್ಡ ಮುದುಕನಗೌಡ, ಸಿ.ಬುಳ್ಳಪ್ಪ, ಪಿ.ಗುರುಪುತ್ರ, ಡಿ.ನಾಗಪ್ಪ, ಸಣ್ಣ ಮುದುನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net