

ಸಿರಿಗೇರಿ: ಗ್ರಾಮಕ್ಕೆ ನಿರಂತರ ಜ್ಯೋತಿ ಯೋಜನೆಯಡಿ ಸಿರಿಗೇರಿ ಕ್ರಾಸ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗ್ರಾಮದ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಆಗ್ರಹಿಸಿ ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ದ್ಯಾವಣ್ಣ ಹಾಗೂ ಪಿಡಿಒ ಯು.ರಾಮಪ್ಪಗೆ ನಿಮಗಾಗಿ ನಾವು ಸಂಸ್ಥೆ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.
ನಿರಂತರ ಜ್ಯೋತಿ ಯೋಜನೆಯಡಿ ನೇರ ವಿದ್ಯುತ್ ಕಲ್ಪಿಸಿದರೆ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ತಪ್ಪಲಿದೆ. ಮಳೆಗಾಲ ಹಿನ್ನೆಲೆಯಲ್ಲಿ ಪದೇ ಪದೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಸಿಸಿ ಕ್ಯಾಮರಾ ಅಳವಡಿಸಿ ಎಂದು ಈ ಹಿಂದೆ ಸ್ಥಳೀಯ ಠಾಣಾಧಿಕಾರಿ ಗ್ರಾಪಂ ಕಚೇರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದು ದೂರಿದರು.
ಪಿಡಿಒ ಯು.ರಾಮಪ್ಪ ಮಾತನಾಡಿ, ಬೇಡಿಕೆಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು. ಸಂಸ್ಥೆಯ ಗೌರವಾಧ್ಯಕ್ಷ ವಿ.ಹನುಮೇಶ್, ಗ್ರಾಮ ಘಟಕದ ಉಪಾಧ್ಯಕ್ಷ ಹಳ್ಳಿ ಮರದ ನಾಗರಾಜ್, ಪ್ರಧಾನ ಕಾರ್ಯದರ್ಶಿ ಕೊಳ್ಳಿ ಶೇಖರ್, ಖಜಾಂಚಿ ಶಿವಾಜಿ ರಾವ್, ನಿರ್ದೇಶಕ ಆಲಂ ಬಾಷಾ, ಪುನೀತ್ ಇದ್ದರು.