ಬಿಜೆಪಿಯಿಂದ ಶೂನ್ಯ ಸಾಧನೆ

28 sirigeri 01 march ph (1)
Published on

ಸಿರಿಗೇರಿ: ಕಾಂಗ್ರೆಸ್ ಮೊದಲಿನಿಂದಲೂ ಬಡವರ, ಶ್ರಮಿಕರ, ರೈತರ ಪಕ್ಷವಾಗಿದ್ದು ಎಲ್ಲ ಪರಿಸ್ಥಿತಿಯಲ್ಲೂ ಸರ್ವರ ಜತೆ ನಿಂತು ನುಡಿದಂತೆ ನಡೆದಿದೆ ಎಂದು ಕಲಾವಿದ ಕೆ.ಬಸವರಾಜ್ ಹೇಳಿದರು.

ಗ್ರಾಮದ 3ನೇ ವಾರ್ಡಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಶನಿವಾರ ಮನೆ ಮನೆ ವಿತರಣೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಿಕ್ಕೆ ತಂದರೆ ನಾಲ್ಕು ಗ್ಯಾರಂಟಿ ಆಶ್ವಾಸನೆ ಈಡೇರಿಸುವ ಭರವಸೆ ಕೊಡುತ್ತಿದ್ದೇವೆ. ಮಾಸಿಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2000 ರೂ. ವಿತರಣೆ, ಅನ್ನಭಾಗ್ಯ ಯೋಜನೆಯಡಿ ಮಾಸಿಕ ಪ್ರತಿ ವ್ಯಕ್ತಿಗೆ ಉಚಿತ 10 ಕೆ.ಜಿ. ಅಕ್ಕಿ ವಿತರಣೆ, ಯುವ ನಿಧಿಯೋಜನೆಯಡಿ ಪ್ರತಿ ತಿಂಗಳು ಪದವೀಧರರಿಗೆ 3000 ರೂ., ಡಿಪ್ಲೊಮಾ ಪದವೀಧರರಿಗೆ ನಿರುದ್ಯೋಗ ಭತ್ತೆಯಾಗಿ ಎರಡು ವರ್ಷದವರೆಗೆ 1500 ರೂ. ನೀಡಲಾಗುವುದು ಎಂದು ತಿಳಿಸಿದರು.

ಸಮಾಜ ಸೇವಕ ನರೇಂದ್ರ ಸಿಂಹ ಮಾತನಾಡಿ, ಬಿಜೆಪಿಯದ್ದು ಶೂನ್ಯ ಸಾಧನೆ. ಹೀಗಾಗಿ ಯುವಕರು ಹಾಗೂ ಜನಸಾಮಾನ್ಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿದೆ. ಇದರ ಸದ್ವಿನಿಯೋಗಕ್ಕಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.

ಮುಖಂಡರಾದ ಕೆ.ಎಂ ಮಲ್ಲಯ್ಯಸ್ವಾಮಿ, ಎಸ್.ಎನ್. ವಿರೂಪಾಕ್ಷಪ್ಪ, ಬಸರ್‌ಕೋಡು ಸೋಮಶೇಖರಪ್ಪ, ವಿ.ರೇಣುಕಪ್ಪ, ಬಿ.ನಾಗೇಂದ್ರ, ಸಿ.ಎಂ. ಕಿಶೋರ್ ಕುಮಾರ್, ರಾಘವೇಂದ್ರ, ನಾಗರುದ್ರ ಗೌಡ, ಎಸ್.ಎಂ. ನಾಗರಾಜಸ್ವಾಮಿ, ಎಸ್.ಬಸವರಾಜ್, ವಿ.ರಮೇಶ್, ಗೋಡೆ ಚಿನ್ನಪ್ಪ, ಬಿ.ಉಮೇಶ್, ಸೋಮೇಶ್, ಎಚ್. ಲಕ್ಷ್ಮಣ್ ಭಂಡಾರಿ, ಎನ್. ಕರಿಬಸಪ್ಪ, ಕೊರವರ ಶಿವಪ್ಪ, ಕೆ.ವೀರೇಶ್, ರಾರಾವಿ ವೆಂಕಟೇಶ್, ಶಿವಪ್ಪ, ದೇವಣ್ಣ, ಸುರೇಶ್, ಲಿಂಗನಗೌಡ, ಎಚ್. ರುದ್ರಪ್ಪ, ವಸ್ತ್ರದ ಮಂಜುನಾಥ ಹಾಗೂ ಕಾರ್ಯಕರ್ತರು ಮನೆಮನೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net