ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಲಹೆ

130922 Sirigeri Kalostava 2022
ಮುದ್ದಟ್ಟನೂರು ಗ್ರಾಮದಲ್ಲಿ ನಡೆದ ಪ್ರತಿಭಾ ಕಾರಂಜಿ ಸಮಾರೋಪ ಸಮಾರಂಭದಲ್ಲಿ ಎಎಪಿ ಮುಖಂಡ ಧರಪ್ಪ ನಾಯಕ ಮಾತನಾಡಿದರು.
Published on

ಸಿರಿಗೇರಿ: ಮುದ್ದಟ್ಟನೂರು ಗ್ರಾಮದಲ್ಲಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ನಡೆಯಿತು. ಸಮಾರೋಪದಲ್ಲಿ ಮಾತನಾಡಿದ ಎಎಪಿ ಮುಖಂಡ ಧರಪ್ಪ ನಾಯಕ, ಮಕ್ಕಳು ಕಠಿಣ ಪರಿಶ್ರಮದಿಂದ ಸತತ ಪ್ರಯತ್ನ ಮಾಡಿದರೆ ಪ್ರತಿಭೆ ಹೊರಹಾಕಲು ಸಾಧ್ಯ ಎಂದರು.

ಇಸಿಒ ಎಚ್.ಪಂಪಾಪತಿ ಮಾತನಾಡಿ, ಶಿಕ್ಷಕರು ತೋರಿದ ಮಾರ್ಗದಲ್ಲಿ ವಿದ್ಯಾರ್ಥಿ ನಡೆಯಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು. ಜಿಪಂ ಮಾಜಿ ಸದಸ್ಯ ರಾಧಾ ದರಪ್ಪ ನಾಯಕ, ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಮಿರಾಮಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷ ಖಾದರ್ ಬಾಷಾ, ಮುಖ್ಯ ಶಿಕ್ಷಕರಾದ ಶ್ರೀರಂಗಸ್ವಾಮಿ, ಬಿಆರ್‌ಪಿ ವೀರೇಶ್, ಸಿಆರ್‌ಪಿಗಳಾದ ಪ್ರಭುರಾಜ್, ಅರುಣ್ ಕುಮಾರ್, ಪ್ರಾಥಮಿಕ ಶಿಕ್ಷಕ ಸಂಘದ ಕಾರ್ಯದರ್ಶಿ ವೈ.ಹನುಮನಗೌಡ, ಖಜಾಂಚಿ ಸತೀಶ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net