ಗಬ್ಬುನಾರುತಿದೆ ಸಿರಿಗೇರಿ ಬಸ್‌ಸ್ಟಾೃಂಡ್‌ನಲ್ಲಿನ ಮಹಿಳಾ ಶೌಚಗೃಹ

Published on

ಸಿರಿಗೇರಿ: ಗ್ರಾಮದ ಸರ್ಕಾರಿ ಬಸ್‌ಸ್ಟಾೃಂಡ್ ಬಳಿ ನಿರ್ಮಿಸಿದ ಸಾರ್ವಜನಿಕ ಮಹಿಳಾ ಶೌಚಗೃಹ ನಿರ್ವಹಣೆಯಿಲ್ಲದೇ ನಿರುಪಯುಕ್ತವಾಗಿದೆ.

2016-17 ನೇ ಸಾಲೀನ 14ನೇ ಹಣಕಾಸಿನ ಯೋಜನೆಯಡಿ ಇದು ನಿರ್ಮಾಣವಾಗಿತ್ತು. 5-6 ತಿಂಗಳ ನಂತರ ನಿರ್ವಹಣೆ ಮಾಡದ ಕಾರಣ ದುಸ್ಥಿತಿ ತಲುಪಿತು. ಈಗ ಸಂಪೂರ್ಣ ಹಾಳಾಗಿದೆ. 26 ಗ್ರಾಮಗಳಿಂದ ಇಲ್ಲಿಗೆ ಪ್ರಯಾಣಿಕರು ಬರುತ್ತಾರೆ. ಅವರಿಗೆ ಶೌಚಾಗೃಹದ ಕೊರತೆ ಎದುರಾಗಿದೆ.

ಈ ಶೌಚಗೃಹ ಗಬ್ಬು ನಾರುತ್ತಿರುವುದರಿಂದ ಇಲ್ಲಿಗೆ ಬರುವ ಜನ ಬಯಲ್ಲನ್ನೇ ಅವಲಂಬಿಸಬೇಕಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ, ಕೂಡಲೇ ಈ ಸಮಸ್ಯೆ ಪರಿಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net