ಭತ್ತ ನಾಟಿ ಮಾಡಿದ ಎಡಿಸಿ, ತಹಸೀಲ್ದಾರ್

Sirigeri batta nati officers
ಸಿರಿಗೇರಿ ಸಮೀಪದ ನಿಟ್ಟೂರು ಗ್ರಾಮದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಸಿರಗುಪ್ಪ ತಹಸೀಲ್ದಾರ್ ನರಸಪ್ಪ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವುದು.
Published on

ಸಿರಿಗೇರಿ: ಬಳ್ಳಾರಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಸಿರಗುಪ್ಪ ತಹಸೀಲ್ದಾರ್ ನರಸಪ್ಪ ಹಾಗೂ ಸಿಬ್ಬಂದಿ ನಿಟ್ಟೂರು ಬಳಿ ಗದ್ದೆಯಲ್ಲಿ ಸೋಮವಾರ ಭತ್ತ ನಾಟಿ ಮಾಡಿದರು.

ಭತ್ತ ನಾಟಿ, ಭತ್ತದ ತಳಿ, ಬೆಳೆಗೆ ತಗಲುವ ವೆಚ್ಚ ಹಾಗೂ ಇತರ ಮಾಹಿತಿ ಪಡೆದರು. ನಂತರ ನಿಟ್ಟೂರು ಹಾಗೂ ಉಡೇಗೋಳದ ಅಶೋಕನ ಶಿಲಾ ಶಾಸನ ಸ್ಥಳಕ್ಕೆ ಭೇಟಿ ನೀಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಶಿಲಾಶಾಸನ ನಿರ್ಲಕ್ಷೃಕ್ಕೆ ಒಳಗಾಗಿರುವುದನ್ನು ನೋಡಿ, ಶಾಸನದ ಸಂರಕ್ಷಣೆ ಹಾಗೂ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು ಎಂದರು.

ತೆಕ್ಕಲಕೋಟೆ ನಾಡಕಚೇರಿಗೆ ಭೇಟಿ ನೀಡಿ ಸುತ್ತಲಿನ ಪರಿಸರ ಶುಚಿತ್ವಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಮರು ಆರಂಭಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net