ಶ್ರೀ ನಾಗನಾಥೇಶ್ವರ ರಥೋತ್ಸವ ಅದ್ದೂರಿ

28 sirigeri 03 march phh
Published on

ಸಿರಿಗೇರಿ: ಗ್ರಾಮದ ಅಧಿದೇವತೆ ಶ್ರೀ ನಾಗನಾಥೇಶ್ವರ ರಥೋತ್ಸವ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ಧೂರಿಯಾಗಿ ಜರುಗಿತು.

ಜಾತ್ರೆಯ ಅಂಗವಾಗಿ ಬೆಳಗ್ಗೆ ರುದ್ರಾಭಿಷೇಕ ನಡೆಯಿತು. ವಿವಿಧ ಹೂವು, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಅನ್ನಸಂತರ್ಪಣೆಯೂ ನಡೆಯಿತು.

ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ತಂದು ತಂದು ಮಡಿತೇರುದೊಂದಿಗೆ ನಾಗನಾಥೇಶ್ವರನಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಆಯಾ ದೇವರ ವಾಸದ ದಿಕ್ಕುಗಳಿಗೆ ಬಲಿ ನೀಡುತ್ತ ಬಂದು, ಕೊನೆಗೆ ಎದರು ಬಸವಣ್ಣ ದೇವಸ್ಥಾನದ ಬಳಿ ಬಲಿ ಸಲ್ಲಿಸಲಾಯಿತು.

ದಾಸಾಪುರ, ಕೊಂಚಿಗೇರಿ, ರಾಂಪುರ, ಮುದ್ದಟ್ಟನೂರು, ಹಾವಿನಾಳು, ಮಾಳಾಪುರ, ಶಾನವಾಸಪುರ, ಕರೂರು, ದರೂರು ಗ್ರಾಮಗಳ ಭಕ್ತರು ಹೂವಿನಹಾರ, ಹೂವು-ಹಣ್ಣು-ಕಾಯಿಗಳನ್ನು ದೇವರಿಗೆ ಸಮರ್ಪಿಸಿದರು. ಯುವಕರು ರಥೋತ್ಸವದ ವೇಳೆ ಡಾ. ಪುನೀತ ರಾಜಕುಮಾರ್, ಕಿಚ್ಚ ಸುದೀಪ್ ಭಾವಚಿತ್ರಗಳನ್ನು ಹಿಡಿದು ಕುಣಿದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net