

ಸಿರಿಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಮುಖ್ಯಅಧೀಕ್ಷಕ ಜೆ.ಡಿ.ಬಸವರಾಜ ತಿಳಿಸಿದರು.
ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಮತ್ತು ನೀಲಾಂಬಿಕಾ ಬಾಲಿಕಾ ಶಾಲೆಯ 303 ಮಕ್ಕಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 54 ವಲಸೆ ಹೋಗಿದ್ದಾರೆ. 249 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದರು.
ಪರಸ್ಪರ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ಹಾಕಲಾಗಿದ್ದು, ಮೂರು ಕಡೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ವೈಯಕ್ತಿಕ ನೀರಿನ ಬಾಟಲ್, ಸ್ಯಾನಿಟೈಸರ್ ತರಲು ಸೂಚಿಸಲಾಗಿದೆ.
ಕೇಂದ್ರದ ಸುತ್ತ 200 ಮೀಟರ್ ಪ್ರವೇಶವನ್ನು ನಿಷೇಧಿತ ವಲಯ ಎಂದು ಘೋಘಿಸಲಾಗಿದೆ. 14 ಕೊಠಡಿಗಳು, ಪ್ರತ್ಯೇಕ 2 ವಿಶೇಷ ಕೋಣೆಗಳನ್ನು ಕೋವಿಡ್-19ಗಾಗಿ ಕಾಯ್ದಿರಿಸಲಾಗಿದೆ. ಪ್ರತ್ಯೇಕ ಬಾಲಕರು, ಬಾಲಕಿಯರ ಶೌಚಗೃಹಗಳಿದ್ದು, ಅಲ್ಲಿ ಸ್ಯಾನಿಟೈಜರ್, ಸಾಬೂನು, ಕರವಸ್ತ್ರದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಗಳಿಗೆ ಎರಡು ಮಾಸ್ಕ್‌ಗಳನ್ನು ಉಚಿತ ನೀಡಲಾಗಿದೆ ಎಂದು ಹೇಳಿದರು.
ಭರಮಸಾಗರ ಪೊಲೀಸ್ ಠಾಣೆ ಎಎಸ್ಸೈ ಕೆ.ಟಿ.ಕೃಷ್ಣಮೂರ್ತಿ, ಸಿಬ್ಬಂದಿ ಮಲ್ಲಿಕಾರ್ಜುನ್, ಮಂಜುನಾಥ್ ಇದ್ದರು.