ಸಿರಿಗೆರೆ ಶ್ರೀಗಳಿಂದ ತರಳಬಾಳು ಹುಣ್ಣಿಮೆ ಸ್ಥಳ ವೀಕ್ಷಣೆ 24ಕ್ಕೆ

SIRIGERE SHREE
Published on

ಭರಮಸಾಗರ: ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಫೆ.4 ರಿಂದ ಹಮ್ಮಿಕೊಂಡಿರುವ 76ನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಪೂರ್ವಸಿದ್ಧ್ದತೆ ಮತ್ತು ಮಹಾಮಂಟಪ ವೀಕ್ಷಣೆಗೆ ಜ. 24ರಂದು ಬೆಳಗ್ಗೆ 10ಗಂಟೆಗೆ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗಮಿಸಲಿದ್ದಾರೆ.

ಸ್ಥಳ ವೀಕ್ಷಣೆ ನಂತರ ಶ್ರೀಗಳು ಎ ಬಿ ಟಿ ಕಲ್ಯಾಣ ಮಂಟಪದಲ್ಲಿ ಹುಣ್ಣಿಮೆ ಮಹೋತ್ಸವಕ್ಕೆ ದೇಣಿಗೆ ಹಾಗೂ ಇತರೆ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವಿಧ ಸಮಿತಿಗಳು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಲಿದ್ದಾರೆ.

ಭರಮಸಾಗರ ಸೇರಿ ಸುತ್ತಮುತ್ತಲ ಗ್ರಾಮಗಳ ಜನರು ಸಭೆಯಲ್ಲಿ ಭಾಗವಹಿಸುವಂತೆ, ಸಭೆಯ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತರಳಬಾಳು ಹುಣ್ಣಿಮೆ ಮಹೋತ್ಸವ ಸಮಿತಿಯವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net