ಕಷ್ಟಕ್ಕೆ ಸ್ಪಂದಿಸಿದ ಸ್ವಾಮೀಜಿಗೆ ಧನ್ಯವಾದ

SIRIGERE SWAMIJI
Published on

ಸಿರಿಗೆರೆ: ಲಾಕ್‌ಡೌನ್ ಸಂದರ್ಭದಲ್ಲಿ ಊರಿಗೂ ಹೋಗಲಾಗದೆ, ಊಟವೂ ಇಲ್ಲದೆ ಬಳಲುತ್ತಿದ್ದ ನನ್ನಂತಹ ನೂರಾರು ವಿದ್ಯಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿಸಿರುವ ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಆಂಧ್ರಪ್ರದೇಶದ ನಂದ್ಯಾಲದಲ್ಲಿರುವ ವಿದ್ಯಾರ್ಥಿ ಎನ್.ಅಜ್ಜಪ್ಪ ಧನ್ಯವಾದ ತಿಳಿಸಿದ್ದಾರೆ.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲದಲ್ಲಿ ಬ್ಯಾಂಕಿಂಗ್ ಪರೀಕ್ಷೆಯ ತರಬೇತಿಗೆ ತೆರಳಿದ್ದ ರಾಜ್ಯದ 60ಕ್ಕೂ ಅಧಿಕ ವಿದ್ಯಾರ್ಥಿಗಳು ಲಾಕ್‌ಡೌನ್‌ನಿಂದ ಕರ್ನಾಟಕಕ್ಕೆ ಬರಲಾಗದೆ, ಊಟವೂ ಸಿಗಲಾಗದೆ ತೊಂದರೆಯಲ್ಲಿದ್ದರು.

ಇಂತಹ ಸಂದರ್ಭದಲ್ಲಿ ನಮ್ಮ ದೂರವಾಣಿ ಕರೆಗೆ ಸ್ಪಂದಿಸಿದ ಶ್ರೀಗಳು, ಮುಖ್ಯಮಂತ್ರಿಗಳ ಮೂಲಕ ನಮಗೆ ಮತ್ತು ಇತರ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಶ್ರೀಗಳ ಸಹಾಯವನ್ನು ತಾವು ಸದಾ ಸ್ಮರಿಸುವುದಾಗಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net