ಸಾಮರಸ್ಯದ ಜೀವನ ನಡೆಸಿ

Sirigere Mallikarjuna Swamiji 15 (1)
Published on

ಸಿರಿಗೆರೆ: ಸತಿ, ಪತಿಗಳು ಪರಸ್ಪರ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ 12ನೇ ಶ್ರದ್ಧಾಂಜಲಿ ಪ್ರಯುಕ್ತ ಇಲ್ಲಿನ ಐಕ್ಯಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ಸರ್ವ ಶರಣ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಾಂಸಾರಿಕ ಜೀವನದ ಯಶಸ್ಸಿಗೆ ಪ್ರೀತಿ, ವಿಶ್ವಾಸ, ನಂಬಿಕೆ ಆಧಾರವಾಗಿರುತ್ತದೆ. ಒಂದೇ ತಂದೆ-ತಾಯಿಯ ಮಕ್ಕಳ ಗುಣಸ್ವಾಭಾವಗಳಲ್ಲಿ ವ್ಯತ್ಯಾಸಗಳಿರುತ್ತವೆ. ಬೇರೆ ಕುಟುಂಬದ ವಧು ಮತ್ತು ವರರ ಮಧ್ಯೆ ವ್ಯತ್ಯಾಸಗಳಿರುರುವುದು ಸಹಜ. ಇದನ್ನು ಅರಿತು ಹೊಂದಾಣಿಕೆ ಜೀವನ ನಡೆಸಬೇಕು ಎಂದರು.

ಮಠದ ಚರಪಟ್ಟಾಧ್ಯಕ್ಷರಾಗಿ 60 ವರ್ಷಗಳ ಕಾಲ ಸಮಾಜ ಸೇವೆ ಮಾಡಿದವರು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಎಂದು ಸ್ಮರಿಸಿದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net