ಸಿರಿಗೆರೇಲಿ ವಾಹನ ಪರಿಶೀಲನೆ

Sirigee korona police
Published on

ಸಿರಿಗೆರೆ: ಸಮೀಪದ ಹಳವುದರ, ಓಬವ್ವನಾಗ್ತಿಹಳ್ಳಿ, ಚಿಕ್ಕೇನಹಳ್ಳಿ, ಜಮ್ಮೇನಹಳ್ಳಿ, ಅಳಗವಾಡಿ ಕಡೆಗಳಿಂದ ಸುಖಸುಮ್ಮನೆ ಓಡಾಡುತ್ತಿರುವ ವಾಹನಗಳನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದರು.

ಬೈಕ್, ಕಾರು, ಆಟೋ, ಟ್ರಕ್, ಟ್ರಾೃಕ್ಟರ್‌ಗಳನ್ನು ನೆಪಹೇಳಿ ಓಡಿಸುವಂತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಿದರೆ ಕರೊನಾ ಹರಡಲು ಅವಕಾಶ ನೀಡಿದಂತಾಗುತ್ತದೆ. ಮನೆಯಿಂದ ಹೊರಬಾರದು. ಮನೆಯಲ್ಲಿಯೇ ಇರಬೇಕು ಎಂದು ಜಾಗೃತಿ ಮೂಡಿಸಿದರು.

ಇಡೀ ವಿಶ್ವದಲ್ಲಿ ಕರೊನಾ ಸೋಂಕು ಹರಡಿ ಲಕ್ಷಾಂತರ ಜನರು ಮೃತಪಡುತ್ತಿದ್ದಾರೆ. ಇದನ್ನರಿತು ಗ್ರಾಮಸ್ಥರು ಸಹ ವಿನಾಕಾರಣ ಓಡಾಡಬಾರದು ಎಂದು ಮನವಿ ಮಾಡಿದರು.

ಪಿಎಸ್‌ಐ ರಾಜು, ಎಎಸ್‌ಐ ಸಿದ್ದರಾಮಪ್ಪ, ಸಿಬ್ಬಂದಿ ವಾಹನಗಳನ್ನು ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net