ಸಿರಿಗೆರೆ ಮಠದಿಂದ ತರಳಬಾಳು ಪ್ರತಿಭಾ ಪುರಸ್ಕಾರ

Sirigere, Math, Taralabalu, Puraskara,
Published on


ಸಿರಿಗೆರೆ: ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ತರಳಬಾಳು ಪ್ರತಿಭಾ ಪುರಸ್ಕಾರ- 2023 ನೀಡಲು ಮುಂದಾಗಿದೆ.

ಸಿರಿಗೆರೆಯ ಶ್ರೀ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಯದಂತೆ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಅರ್ಹರು.

ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಸಿರಿಗೆರೆಯಲ್ಲಿ ಎಂ.ಬಸವಯ್ಯ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದ ಶಿಕ್ಷಣಕ್ಕೆ ಉಚಿತ ಊಟ, ವಸತಿ ಹಾಗೂ ಕಾಲೇಜು ಶುಲ್ಕ ನೀಡಲಾಗುತ್ತದೆ.

ಲಿಖಿತ ಪರೀಕ್ಷೆಯನ್ನು ಎಂ.ಬಸವಯ್ಯ ಪಿಯುಸಿ ಕಾಲೇಜಿನಲ್ಲಿ ಮೇ 22 ರಂದು ಬೆಳಗ್ಗೆ 11ಕ್ಕೆ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ 9449981283 ಸಂಪರ್ಕಿಸಬಹುದು ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net