ಬಿಎಸ್‌ವೈಗೆ ಸಿರಿಗೆರೆ ಮಠವೇ ಹೈಕಮಾಂಡ್

VIJAYENDRA
Published on

ಚಿತ್ರದುರ್ಗ: ಸಿರಿಗೆರೆ ಮಠ ಎಂದರೆ, ಗುರು, ಜ್ಞಾನ, ಅಧ್ಯಾತ್ಮ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಿರಿ ಎಂದು ನಾನು ಅರ್ಥೈಸಿಕೊಂಡಿದ್ದೇನೆ ಎಂದು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರೋಪ ಸಮಾರಂಭ ಹಾಗೂ ರೈತರ ಸಮಾವೇಶದಲ್ಲಿ ಮಾತನಾಡಿದರು.

ಬಸವಾದಿ ಶರಣರ ಸಮಕಾಲೀನರು, ಶ್ರೀಮಠದ ಸ್ಥಾಪಕರೂ ಆದ ವಿಶ್ವಬಂಧು ಮರುಳುಸಿದ್ಧರು ಸಮಾಜದಲ್ಲಿದ್ದ ಅಜ್ಞಾನ, ಅಸಮಾನತೆ, ಮೌಢ್ಯ ಹೋಗಲಾಡಿಸಿ, ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಅಂದು ಬೆಳಗಿದ್ದ ಜ್ಯೋತಿ ಇವತ್ತಿಗೂ ಲಕ್ಷಾಂತರ ಜನರ ಬದುಕಿನ ಮಾರ್ಗಕ್ಕೆ ಬೆಳಕಾಗಿದೆ ಎಂದರು.

ಹಿರಿಯ ಶ್ರೀಗಳು ಎಲ್ಲ ವಿಷ ವರ್ತುಲಗಳನ್ನು ಭೇದಿಸಿ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹೈಕಮಾಂಡ್ ಮಾತನ್ನು ಕೇಳುತ್ತಿದ್ದರೊ ಇಲ್ಲವೋ ಗೊತ್ತಿಲ್ಲ. ಆದರೆ, ಸಿರಿಗೆರೆ ಮಠ ಮತ್ತು ಡಾಕ್ಟರ್ ಶ್ರೀಗಳ ಮಾತನ್ನು ಮೀರುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net