

ಸಿರಿಗೆರೆ: ಲಾಕ್‌ಡೌನ್ ಆಗಿದ್ದರಿಂದ ಹಡಪದ ಸಮುದಾಯದವರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ಅಂಗಡಿ ಮುಚ್ಚಿ ದೇಶದ ಒಳಿತಿಗಾಗಿ ಸಹಕರಿಸಿದ್ದೇವೆ. ನಮ್ಮಲ್ಲೂ ಕೆಲವರು ದಿನಗೂಲಿ ಕೆಲಸಗಾರರಿದ್ದು, ಅವರು ಬಹಳ ತೊಂದರೆಯಲ್ಲಿದ್ದಾರೆ.
ಅಂಗಡಿ ಬಂದ್ ಮಾಡಿದ್ದರಿಂದ ಸಮಾಜದವರಿಗೆ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಅದಕ್ಕಾಗಿ ಸರ್ಕಾರ ಹಡಪದ ಸಮಾಜದವರಿಗೆ ಮಾಸಿಕ 5 ಸಾವಿರ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪಿಡಿಒ ಅವರ ಮೂಲಕ ಸರ್ಕಾರ ಮನವಿ ರವಾನಿಸಿದರು.