ಸಿರಿಗೆರೆಯಲ್ಲಿ ಶಿವಧ್ವಜಾರೋಹಣ

CTD SIRIGERE SWAMIJI 01 (2)
Published on

ಸಿರಿಗೆರೆ: ಹಳೇಬೀಡಿನಲ್ಲಿ ಶನಿವಾರ ಚಾಲನೆ ಪಡೆದುಕೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಿರಿಗೆರೆ ಗ್ರಾಮದಲ್ಲಿ ವಿದ್ಯಾರ್ಥಿಗಳು, ಶಾಲೆ, ಕಾಲೇಜು ಸಿಬ್ಬಂದಿ ಶನಿವಾರ ಬೀಳ್ಕೊಡುಗೆ ನೀಡಿದರು.

ಇಲ್ಲಿನ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಕಂಚಿನ ಪ್ರತಿಮೆ, ಗುರುಶಾಂತರಾಜ ದೇಶೀಕೇಂದ್ರ ಸ್ವಾಮೀಜಿ ಗದ್ದುಗೆಗೆ ಶ್ರೀಗಳು ಪೂಜೆ ಸಲ್ಲಿಸಿದರು. ಬಳಿಕ ಶಿವಧ್ವಜಾರೋಹಣ ನೆರವೇರಿಸಿ, ಗ್ರಾಮದಲ್ಲಿ ಪಾದಯಾತ್ರೆ ನಡೆಸಿದರು.

ನಂತರ ವಾಹನದಲ್ಲಿ ಹಳೇಬೀಡಿನತ್ತ ತೆರಳಿದರು. ಈ ವೇಳೆ ಮಾರ್ಗ ಮಧ್ಯದಲ್ಲಿ ಹತ್ತಾರು ಹಳ್ಳಿಗಳ ಜನರು ಶ್ರೀಗಳಿಗೆ ಗೌರವ ಸಲ್ಲಿಸಿ ಬೀಳ್ಕೊಟ್ಟರು.

ಸಾಧು ಸದ್ಥರ್ಮ ಸಂಘದ ಅಧ್ಯಕ್ಷ ಜಯದೇವಪ್ಪ, ಶಾಸಕ ಎಂ.ಚಂದ್ರಪ್ಪ, ವೃತ್ತ ನಿರೀಕ್ಷಕ ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net