ನಾಡಿನ ಹಿರಿಮೆ ಹೆಚ್ಚಿಸಲು ಲಿಂಗೈಕ್ಯ ಶ್ರೀಗಳ ಕೊಡುಗೆ ಆಪಾರ

CTD 24 BSY SIRIEGEDD
Published on

ಚಿತ್ರದುರ್ಗ: ಆಧುನಿಕ ಜಗತ್ತಿನಲ್ಲಿ ಮಠ ಮಾನ್ಯಗಳಿಂದಾಗಿ ಭಾರತೀಯರ ಗೌರವ ಹೆಚ್ಚಾಗಿದೆ,ಈ ನಿಟ್ಟಿನಲ್ಲಿ ಸಿರೆಗೆರೆ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಕೊಡುಗೆ ಕೂಡ ಅಪಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಚಿತ್ರದುರ್ಗ ತಾಲೂಕು ಸಿರಿಗೆರೆ ಶ್ರೀತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 30ನೇ ಶ್ರದ್ಧಾ ಂಲಿ ಸಮಾರಂಭದಲ್ಲಿ ಮಾತನಾಡಿದ ಅವರು,ಅನ್ನ ಹಾಗೂ ಜ್ಞಾನ ದಾಸೋಹ,ಸಾಹಿತ್ಯ,ಸಂಸ್ಕೃತಿಯ ಮೂಲಕ ನಾಡಿನ ಹಿರಿಮೆ ಹೆಚ್ಚಿಸಲು ಹಿರಿಯ ಶ್ರೀಗಳು ನೀಡಿದ ಕೊಡುಗೆ ಅಪಾರ.

ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರು 1947ರಲ್ಲಿಯೇ ಸಿರಿಗರೆಯಲ್ಲಿ ಹೈಸ್ಕೂಲ್ ಸ್ಥಾಪಿಸುವ ಮೂಲ ಎಲ್ಲ ವರ್ಗದ ಬಡ ವಿ ದ್ಯಾರ್ಥಿಗಳಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ಶಿಕ್ಷಣದ ಅವಶ್ಯಕತೆಯನ್ನು ಅವರು ಅರ್ಥ ಮಾಡಿಕೊಂಡಿದ್ದರು. ಭಾವ್ಯಕತೆ ಹಾಗೂ ಮಾನವೀಯತೆ ಅವರು ಬೋಧಿಸಿದ್ದರು.

ಶಿಕ್ಷಣ ಹಾಗೂ ಆಶ್ರಯ ನೀಡುವ ನಿಟ್ಟಿನಲ್ಲಿ ನಾಡಿ ಎಲ್ಲ ಮಠಗಳ ಕೊಡುಗೆ ನೀಡುತ್ತಿವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ವೀರ ಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಅದಕ್ಕೆ 500 ಕೋಟಿ ರೂ.ಅನುದಾನ ನೀಡಿದ್ದೆ. ಅತಿವೃಷ್ಠಿ ಹಾಗೂ ಕೊವಿಡ್ ನಡುವೆ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇ.

ಡಾಕ್ಟರ್ ಶ್ರೀ ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಅವರು ಈ ಭಾಗದ ರೈತರು ಸ್ವಾವಲಂಬಿ ಬದುಕಿಗೆ ನೆರವಾಗುತ್ತಿದ್ದಾರೆ. ಸರ್ಕಾರ ವೂ ಈ ನಿಟ್ಟಿನಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದೇವೆ. ಹೈನು ಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಹಣಕಾಸಿನ ನೆರವು ನೀಡಲಾಗಿದೆ. ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸ ಲಾಗಿದೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ.ಶ್ರೀ ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಮಾತನಾಡಿ,ಹಿರಿಯ ಶ್ರೀಗಳು ಕಾಸು-ಕಾಲಕ್ಕೆ ಮಹತ್ವವನ್ನು ನೀಡುತ್ತಿದ್ದರು. ಹಿರಿಯ ಶ್ರೀಗಳು ಸೀನಿದರೆ ವಿಧಾನಸೌಧ ನಡುಗುತ್ತಿತ್ತು ಎಂಬ ಪ್ರತೀತಿ ಇತ್ತು. ದೇವರಾಜ ಅರಸು ಮಂತ್ರಿ ಮಂಡಲದ ರಚನೆ ಮಠದಲ್ಲಿ ಆಗುತ್ತಿತ್ತು ಎಂದರು.

ಬೊಮ್ಮಾಯಿ ಹಾಗೂ ಯಡಿಯೂರಪ್ಪ,ಗರ್ಭಗುಡಿ-ಉತ್ಸವಮೂರ್ತಿ ಇದ್ದಂತೆ. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಿ ರಾಜ್ಯ ಕಟ್ಟಿದ್ದಾರೆ. ಯಡಿಯೂರಪ್ಪ ಶಿಕಾರಿಪುರದಲ್ಲಿ,ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರು ತರಳಬಾಳು ಹುಣ್ಣಿಮೆ ಮಹೋತ್ಸವ ವನ್ನು ನಡೆಸಿಕೊಟ್ಟಿದ್ದಾರೆ.

ಭರಮಸಾಗರ ಏತ ನೀರಾವರಿಗೆ ನೆರವಾಗಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್ ವೀರ ಅಭಿಮನ್ಯವೆಂದು ಕರೆಯಬಹುದು. 2011ರ ಬ್ಯಾಚ್‌ನ 362 ಕೆಎಎಸ್ ಅಧಿಕಾರಿಗಳ ಭವಿಷ್ಯವನ್ನು ಈ ಸರ್ಕಾರ ಕಾಪಾಡಿತು. ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ಕಾನೂನು ಅಡಿಯಲ್ಲೇ ಮನವರಿಕೆ ಮಾಡಿಕೊಡಲಾಯಿತು. ಏನೇ ಸಮಸ್ಯೆ ಎದುರಾದರೂ ಅದನ್ನು ಬಗೆಹರಿಸಲು ಬೊಮ್ಮಾಯಿ ಅವರಿಗೆ ಸೇನಾಧಿಪತಿ ಮಾಧುಸ್ವಾಮಿ ಬೇಕು. ಮಾಧುಸ್ವಾಮಿ ಕರ್ನಾಟಕದ ಸರ್ಧಾರ್ ವಲ್ಲಭಭಾ ಯಿ ಪಟೇಲ್ ಇದ್ದಂತೆ ಎಂದರು.

ಆರ್ಡರ್ ಕೊಟ್ಟು ಊರಿಗೆ ಬಾ

ಶ್ರೀ ಮಠದ ಮೂಲ ಪುರುಷ ಮರಳು ಸಿದ್ಧರು12ನೇ ಶತಮಾನದಲ್ಲೇ‘ ತರಳ ಬಾಳು’ ಎಂಬ ಪಂಚಾಕ್ಷರಿ ಮಂತ್ರವನ್ನು ಬೋಧಿಸಿ ದ್ದರು. ಹಿರಿಯ ಶ್ರೀಗಳ ಶ್ರದ್ಧಾಂಜಲಿ ಸಮಾರಂಭ ಹಾಗೂ ತರಳಬಾಳು ಹುಣ್ಣಿಮೆ ನಮ್ಮ ಮಠದ ಎರಡು ಪ್ರಮುಖ ಕಾರ‌್ಯ ಕ್ರಮ ಗಳಾಗಿವೆ.

ವಿಜಯನಗರ ಜಿಲ್ಲೆ ಕೊಟ್ಟೂರಲ್ಲಿ 2023ರಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ. ಆಗ ಅಲ್ಲಿಯ ಏತ ನಿರಾವರಿ ಯೋಜನೆಗೆ ಈ ಸರ್ಕಾರ ಆದೇಶವನ್ನು ಕೊಟ್ಟು ಬರ ಬೇಕೆಂದು ಸಿಎಂ ಅವರನ್ನು ಆಹ್ವಾನಿಸಿದರು. ಏಕೆಂದರೆ ವಿಳಂಬವಾದ ಚುನಾವಣೆ ನೀತಿ ಸಂಹಿತೆ ಘೋಷಣೆ ಆಗುತ್ತದೆ ಎಂದು ಶ್ರೀಗಳು ಎಚ್ಚರಿಸಿದರು.

ಸಿರೆಗೆರೆಯ ಶ್ರೀ ಗುರುಶಾಂತ ರಾಜದೇಶಿಕೇಂದ್ರ ಸ್ವಾಮೀಜಿ ಅವರ ಸ್ಮರಣಾರ್ಥ ಇಲ್ಲಿ ಓದುವಂಥ ಸಾವಿರಾರು ಮಕ್ಕಳಿಗೆ ಈ ವರ್ಷ ದಿಂದ ಉಚಿತ ಊಟ,ವಸತಿ ಸೌಲಭ್ಯ ಕಲ್ಪಿಸಿದ್ದೇವೆ. ನಾವು ಯಾರಿಗೂ ವೈಯಕ್ತಿಕ ಶಿಫಾರಸು ಪತ್ರ ಕೊಟ್ಟಿಲ್ಲ. ಆದರೆ ಭರಮಸಾಗರ, ಜಗಳೂರು ಹಾಗೂ ಸಾಸ್ವೆಹಳ್ಳಿ ನೀರಾವರಿ ಯೋಜನೆ ಗಳನ್ನು ಪೂರ್ಣ ಗೊಳಿಸುವಂತೆ ಪತ್ರ ಬರೆದಿದ್ದೇವೆ ಎಂದರು.

ಡಾಕ್ಟರ್ ಶ್ರೀಗಳು ಲೇಖನಗಳ ಸಂಗ್ರಹ ಭ್ರಷ್ಟಾಚಾರದ ಮೊದಲ ಹೆಜ್ಜೆ,ಕಪ್ಪೆಚಿಪ್ಪು ವರ್ಸಸ್ ಮತ್ತುರತ್ನ,ಹಣದ ಝಣತ್ಕಾರ ಪ್ರೀತಿಗೆ ಸಂಚಕಾರ ಕೃತಿಗಳನ್ನು ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿ,ಯಡಿಯೂರಪ್ಪ ಹಾಗೂ ಸಿಎಂ ಲೋಕಾರ್ಪಣೆಗೊಳಿಸಿದರು. ಬೆಂಗಳೂ ರಿನ ಗಾನಗಂಗಾ ಸಂಗೀತ ವಿದ್ಯಾಲಯದ ಶರಣೆ ಗೀತಾ ಬತ್ತದ್ ವಚನ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಬೇಲೂರಿನ ಶರಣೆ ಪೃಥ್ವಿ, ಹೊನ್ನಾಳಿಯ ಶರಣೆ ಐಶ್ವರ್ಯ ಭರತನಾಟ್ಯ ಪ್ರದರ್ಶಿಸಿದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್,ಶಾಸಕರಾದ ಎಂ.ಚಂದ್ರಪ್ಪ,ಎಂ.ಬಿ.ಪಾಟೀಲ್,ಜಿ.ಎಚ್.ತಿಪ್ಪಾರೆಡ್ಡಿ,ಬೆಳ್ಳಿಪ್ರಕಾಶ್, ಮಾಡಾಳ್‌ವಿರೂಪಾಕ್ಷಪ್ಪ ಹಾಗೂ ಎಸ್.ವಿ.ರಾಮಚಂದ್ರಪ್ಪ ಮಾತನಾಡಿದರು. ಸಿರಿಗೆರೆ ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಗುರುವಂದನೆ ಸಲ್ಲಿಸಿದರು. ಶಾಸಕರಾದ ಎಸ್.ಎ.ರವೀಂದ್ರನಾಥ್, ಅರುಣ್ ಕುಮಾರ್, ಪ್ರೊ.ಲಿಂಗಣ್ಣ,ಎಂಎಲ್‌ಸಿ ಕೆ.ಎಸ್.ನವೀನ್,ಡಿಸಿ ಕವಿತಾ ಎಸ್ ಮನ್ನಿಕೇರಿ,ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ,ಎಸ್ಪಿ ಕೆ.ಪರಶು ರಾಮ್,ಬಿಜೆಪಿ ಮುಖಂಡ ಜಿ.ಎಚ್.ಅನಿತ್‌ಕುಮಾರ್ ಮತ್ತಿತರರು ಇದ್ದರು.

-----

ಕೋಟ್

ಅರಮನೆ-ಗುರುಮನೆಗೂ ಇರುವ ಅತ್ಯಂತ ಅವಿನಾಭಾವ ಸಂಬಂಧದ ಪರಂಪರೆ ಈಗಲು ಮುಂದುವರಿದಿದೆ. ಗುರುಗಳ ಮಾತು ಸಮಾಜದ ದನಿ. ಇದನ್ನು ಸರ್ಕಾರ ಕೇಳಿಸಿಕೊಳ್ಳ ಬೇಕಾಗುತ್ತದೆ. ಕೂಲಿಕಾರರ ಶ್ರಮ ಮತ್ತು ರೈತರ ಬೆವರಿನಲ್ಲಿ ದೇವರಿದ್ದಾನೆ. ಶ್ರೀಮಠ ಮೊದಲಿನಿಂದಲೂ ರೈತರ ಏಳಿಗೆಗೆ ಶ್ರಮಿಸುತ್ತಿದೆ. ಬದುಕು ವ್ಯವಹಾರವಲ್ಲ, ದುಡ್ಡು ಸಂಬಂಧವನ್ನು ಕೆಡಿಸುತ್ತದೆ. ಹಿರಿಯ ಶ್ರೀಗಳ ತಾತ್ವಿಕ ಆದರ್ಶಗಳನ್ನು ಅಳವಡಿಸಿಕೊಂಡು ಸರ್ಕಾರ ನಾಡಿಗೆ,ಶ್ರೀ ಮಠಕ್ಕೆ ಗೌರವಂಥ ರೀತಿಯಲ್ಲಿ ಕೆಲಸ ಮಾಡುತ್ತದೆ.

ಬಸವರಾಜ ಬೊಮ್ಮಾಯಿ,ಮುಖ್ಯಮಂತ್ರಿ

------

ಕೋಟ್

ಧರ್ಮ,ಜಾತಿ,ತತ್ವ ಸಿದ್ಧಾಂತಗಳ ಮಧ್ಯೆ ವ್ಯತ್ಯಾಸ ಇಲ್ಲದೆಯೇ ಇರುವ ಏಕೈಕ ಧರ್ಮವೆಂದರೆ ಅದು ಬಸವ ಧರ್ಮ.ಇಲ್ಲಿ ಕಾಯಕ ನಿಷ್ಠೆ ಮೂಲಕ ಶಿವಪಥ ಕಾಣುವ ಮಾರ್ಗ ತೋರಿಸಲಾಗಿದೆ. ಭ್ರಷ್ಟಾಚಾರದ ಮೂಲ ನಮ್ಮೆಲ್ಲರ ಆಲೋಚನೆಯಲ್ಲಿದೆ. ವ್ಯವಸ್ಥೆ ರಾಜ ಕಾರಣಿಗಳನ್ನು ಭ್ರಷ್ಟರನ್ನಾಗಿ ಮಾಡುತ್ತಿದೆ. ಭ್ರಷ್ಟಾಚಾರ ಕಡಿಮೆ ಆಗಬೇಕಿದೆ.

ಜೆ.ಸಿ.ಮಾಧುಸ್ವಾಮಿ,ಕಾನೂನು ಸಚಿವ

-----

ಕೋಟ್

ಪ್ರತಿ ವರ್ಷವೂ ಈ ಸಮಾರಂಭಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದೆ. ಲಿಂಗೈಕ್ಯ ಗುರುಗಳು ರಾಜ್ಯದ ಮಹಾನ್ ಶಕ್ತಿಯಾಗಿದ್ದರು. ಬಸ ವಾದಿ ತತ್ವ,ದಾಸೋಹಗಳ ಮೂಲಕ ಗ್ರಾಮೀಣರ ಶಿಕ್ಷಣ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ್ದರು. ಡಾಕ್ಟರ್‌ಗುರುಗಳು ನೀರಾವರಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಭಗೀರಥರಾಗಿದ್ದಾರೆ

ಜಿ.ಎಂ.ಸಿದ್ದೇಶ್ವರ್,ದಾವಣಗೆರೆ ಸಂಸದ.

-----

ಕೋಟ್

ಲಿಂಗೈಕ್ಯ ಶ್ರೀಗಳು ಸಮಾಜವನ್ನು ತಿದ್ದಿದ್ದರು. ಸಂಸ್ಕಾರವನ್ನು ನೀಡಿದ್ದರು. ಹಿರಿಯ ಶ್ರೀಗಳು ಹಿಂದಿನಿಂದಲೂ ಶಿಕ್ಷಣಕ್ಕೆ ಅತ್ಯಂತ ಮ ಹ ತ್ವವನ್ನು ಕೊಟಿದ್ದರಿಂದ ಎಲ್ಲ ಜಾತಿ,ವರ್ಗದವರಿಗೂ ಶಿಕ್ಷಣ ದೊರಕುವಂತಾಗಿದೆ. ಭರಮಸಾಗರ ಏತ ನೀರಾವರಿ ಯೋಜನೆ ಜಾರಿಯಾ ಗುತ್ತಿದೆ. ಇದು ನನ್ನ ಅನೇಕ ಜನ್ಮಗಳ ಪುಣ್ಯ.

ಎಂ.ಚಂದ್ರಪ್ಪ,ಶಾಸಕ,ಹೊಳಲ್ಕೆರೆ

----

ಕೋಟ್

ತ್ರಿವಿಧ ದಾಸೋಹಿಯಾಗಿದ್ದ ಲಿಂಗೈಕ್ಯ ಶ್ರೀಗಳ ಕತೃತ್ವ ಶಕ್ತಿ ಅತ್ಯಂತ ಹಿರಿದಾದದ್ದು. ಕುಗ್ರಾಮದಲ್ಲಿ ಹೈಸ್ಕೂಲ್ ಸ್ಥಾಪನೆಯೊಂದಿಗೆ ಇಂ ದು ನಾಡಿನಾದ್ಯಂತ 175ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಶ್ರೀ ಮಠಕ್ಕೆ ಸಲ್ಲುತ್ತದೆ. ಇವುಗಳಲ್ಲಿ 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿರುವುದು ಹೆಗ್ಗಳಿಕೆಯೇ ಸರಿ. ನ್ಯಾಯಪೀಠವನ್ನು ನಡೆಸುವ ಡಾಕ್ಟರ್ ಗುರುಗಳು ಕಾರ‌್ಯ ಶ್ಲಾಘನೀಯ.

ಎಂ.ಬಿ.ಪಾಟೀಲ್,ಮಾಜಿ ಸಚಿವ

----

ಕೋಟ್

ಡಾಕ್ಟರ್‌ಗುರುಗಳು ಕಾಲಿಟ್ಟ ನೆಲ ಬಂಗಾರವಾಗುತ್ತದೆ. ಇವರಿಂದಾಗಿ ನಮ್ಮ ಭಾಗದ ರೈತರು ಇಂದು ನೆಮ್ಮದಿ ಕಾಣುವಂತಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಜಗಳೂರು ಭಾಗದ ಕಾಮಗಾರಿಗೆ ದಸರಾದಲ್ಲಿ ಭೂಮಿ ಪೂಜೆ ನೆರವೇರಲಿದೆ. ಪರಮ ಪೂಜ್ಯರ ಋಣ ತೀರಿಸಲು ಎಷ್ಟು ಜನ್ಮವನ್ನು ಎತ್ತ ಬೇಕೋ ಗೊತ್ತಿಲ್ಲ.

ಎಸ್.ವಿ.ರಾಮಚಂದ್ರ,ಶಾಸಕ ಜಗಳೂರು

----

ಕೋಟ್

ಚಿತ್ರದುರ್ಗದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿದ್ದ ಸಂದರ್ಭದಲ್ಲಿ ಮೈಸೂರು ಮಹಾರಾಜರು ಭಾಗವಹಿಸಿದ್ದು ನೆನಪಿ ದೆ. ಮೆಡಿಕಲ್ ಕಾಲೇಜು,ಇಂಜಿನಿಯರಿಂಗ್ ಕಾಲೇಜು ಎನ್ನದೇ ಮೂಲ ಶಿಕ್ಷಣಕ್ಕೆ ಮಠ ಹೆಚ್ಚಿನ ಮಹತ್ವವನ್ನು ನೀಡಿದೆ. ಹಿರಿಯ ಶ್ರೀಗಳು ಎಂಥ ಸಮಸ್ಯೆಗಳು ಎದುರಾದರೂ ಎದೆಗುಂದದೆ ಸಮಾಜವನ್ನು ಸಂಘಟಿಸಿದ್ದರು.

ಜಿ.ಎಚ್.ತಿಪ್ಪಾರೆಡ್ಡಿ,ಶಾಸಕ,ಚಿತ್ರದುರ್ಗ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net