ರಾಜ್ಯದ ವಿದ್ಯಾರ್ಥಿಗಳಿಗೆ ಶ್ರೀಗಳ ಸಹಕಾರ

SIRIGERE SWAMIJI
Published on

ಸಿರಿಗೆರೆ: ಕೋಚಿಂಗ್ ಪಡೆಯಲು ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಆಂಧ್ರದ ನಂದ್ಯಾಲಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಅಲ್ಲೇ ಲಾಕ್‌ಡೌನ್ ಆಗಿದ್ದಾರೆ.

80ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಬಳಿ ಫೋನ್ ಮೂಲಕ ಸಂಕಷ್ಟ ಹೇಳಿಕೊಂಡಿದ್ದು, ಶ್ರೀಗಳು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಕುರಿತು ವಿವರಿಸಿದ್ದಾರೆ.

ಶ್ರೀಗಳ ಮಾತಿಗೆ ಸ್ಪಂದಿಸಿರುವ ಸಿಎಂ ರಾಜ್ಯದ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಾಹನದಲ್ಲಿ ಕರೆಯಿಸಿ ಅವರನ್ನು ತಪಾಸಣೆ ಮಾಡಿಸಿ ಅವರ ಜಿಲ್ಲೆಗಳಿಗೆ ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ.

ನಂದ್ಯಾಲದಲ್ಲಿ 80ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕೋಚಿಂಗ್ ಪಡೆಯಲು ಬಂದಿದ್ದೇವೆ. ನಮಗೆ ಲಾಕ್‌ಡೌನ್ ಕಾರಣದಿಂದ ದಿನದಿಂದ ದಿನಕ್ಕೆ ಆಹಾರ, ಹಣದ ಸಮಸ್ಯೆಯ ಪರಿಸ್ಥಿತಿಯಲ್ಲಿದ್ದೇವೆ. ನಾವೆಲ್ಲರೂ ಒಂದೇ ಪಿಜಿಯಲ್ಲಿ ಇದ್ದು ಆರೋಗ್ಯವಾಗಿದ್ದೇವೆ. ನಮಲ್ಲಿ ಒಬ್ಬರಿಗೆ ವೈರಸ್ ಬಂದರೆ ಎಲ್ಲರಿಗೂ ತೊಂದರೆಯಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net