ಚಿರತೆ ದಾಳಿಗೆ ಹಸುವಿಗೆ ಗಾಯ

Sirigere Chirate 07
Published on

ಸಿರಿಗೆರೆ; ಸಮೀಪದ ಆಲಘಟ್ಟ ಗ್ರಾಮದಲ್ಲಿ ಗುರುವಾರ ರಾತ್ರಿ ನಾಗರಾಜಪ್ಪ ಅವರ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ಹಸುವಿನ ಮೇಲೆ ದಾಳಿ ನಡೆಸಿ ಪರಾರಿ ಆಗಿದೆ.

ಹಸಿವಿನ ಚೀರಾಟಕ್ಕೆ ಎಚ್ಚರಗೊಂಡ ಮಾಲೀಕ ನಾಗರಾಜಪ್ಪ, ಓಡಿಬಂದು ಹಸುವನ್ನು ರಕ್ಷಣೆ ಮಾಡಿದ್ದಾರೆ. ಗ್ರಾಮದಲ್ಲಿ ಈ ಮೊದಲು ಇೀ ರೀತಿಯ ಮೂರು ಪ್ರಕರಣ ನಡೆದಿದ್ದವು.

ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕಾಗಮಿಸಿ ಬೋನ್ ಅಳವಡಿಸಿದರೂ ಚಿರತೆ ಸೆರೆಯಾಗಿರಲಿಲ್ಲ. ಎಲ್ಲಿಗೋ ಹೋಗಿರಬಹುದು ಎಂದುಕೊಂಡಿದ್ದ ಗ್ರಾಮಸ್ಥರಿಗೆ ಈತ ಚಿರತೆ ಪ್ರತ್ಯಕ್ಷವಾಗಿರುವುದು ಆತಂಕ ಹೆಚ್ಚಿಸಿದೆ.

ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾಡುಪ್ರಾಣಿಗಳ ಭಯದಿಂದ ತಮ್ಮನ್ನು ಮತ್ತು ಜಾನುವಾರುಗಳನ್ನು ರಕ್ಷಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net