

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತೀಯ ಸಾಂಸ್ಕೃತಿಕ ಸಂಘವು ಇತ್ತೀಚೆಗೆ ಪುಣೆಯಲ್ಲಿ ನಡೆಸಿದ 21ನೇ ಪ್ರದರ್ಶಕಗಳ ಕಲೆಗಳ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದ ಭರತನಾಟ್ಯ ಸ್ಪರ್ಧೆಯ ಕ್ಲಾಸಿಕಲ್ ಸೋಲೋದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ್ದಾಳೆ. ನಗರದ ಶಾಂತಲಾ ನೃತ್ಯಾಲಯದ ವಿದ್ಯಾರ್ಥಿನಿ ಸಿರಿಗೌರಿ ಎಸ್. ಭಾಲೆರಾವ್ ವಿದುಷಿ ವಿಜೇತಾ ವರ್ಣೇಕರ ಅವರಲ್ಲಿ ತರಬೇತಿ ಪಡೆದಿದ್ದಾಳೆ. ಅ. 25ರಿಂದ 29ರವರೆಗೆ ಥೈಲ್ಯಾಂಡ್‌ನ ಪಟ್ಟಾಯಾದ ಬುರಾಯಾ ವಿಶ್ವವಿದ್ಯಾಲಯದ ಕಲೆ ಹಾಗೂ ಸಂಸ್ಕೃತಿ ಕೇಂದ್ರದಲ್ಲಿ ನಡೆಯಲಿರುವ 15ನೇ ಕಲ್ಚರಲ್ ಒಲಿಂಪಿಯಾಡ್ ಫಾರ್ ಆರ್ಟ್ ಆ್ಯಂಡ್ ಕಲ್ಚರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ.