ಸಿರಿಗೇರಿ ಗ್ರಾಪಂ ಅಧ್ಯಕ್ಷಯಾಗಿ ಲೀಲಾವತಿ

180422 Sirigeri Gramapanchayat President Selcection
ಸಿರಗೇರಿ ಗ್ರಾಪಂ ನೂತನ ಅಧ್ಯಕ್ಷೆ ಲೀಲಾವತಿಯನ್ನು ಸನ್ಮಾನ ಮಾಡಲಾಯಿತು.
Published on

ಸಿರಿಗೇರಿ: ಬಲು ಕುತೂಹಲ ಮೂಡಿಸಿದ್ದ ಇಲ್ಲಿನ ಗ್ರಾಪಂ ಅಧ್ಯಕ್ಷ ಸ್ಥಾನ ಯಾರ ಪಾಲಾಗುತ್ತದೆ ಎಂಬುದಕ್ಕೆ ಸೋಮವಾರ ತೆರೆಬಿದ್ದಿದೆ. ತಾಲೂಕಿನಲ್ಲೇ ದೊಡ್ಡದು ಎಂಬ ಖ್ಯಾತಿ ಪಡೆದಿರುವ ಇಲ್ಲಿನ ಗ್ರಾಪಂನಲ್ಲಿ 31 ಸದಸ್ಯ ಬಲವಿದೆ.

ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು, ಹಾವು-ಏಣಿ ಆಟದಲ್ಲಿ ಕೊನೆಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲೀಲಾವತಿ ಬಸವರಾಜ ಗೌಡ ಆಯ್ಕೆಯಾಗಿದ್ದಾರೆ. ಚುನಾವಣಾ ದಿನಾಂಕ ಸೋಮವಾರ ನಿಗದಿಯಾಗಿತ್ತು. ಗ್ರಾಪಂನಲ್ಲಿ ಲೀಲಾವತಿ ಮತ್ತು ಶಾಂತಮ್ಮ ಪಕ್ಕೀರಪ್ಪ ಸ್ಪರ್ಧಿಸಿದ್ದರು. ನಂತರ ನಡೆದ ಮತದಾನದಲ್ಲಿ 17 ಸದಸ್ಯರು ಲೀಲಾವತಿಗೆ 13 ಸದಸ್ಯರು ಶಾಂತಮ್ಮಗೆ ಮತ ಹಾಕಿದ್ದು, ಒಂದು ಅಸಿಂಧುವಾಗಿದೆ.

ಪಿಡಿಒ ಶಿವಕುಮಾರ ಕೋರಿ, ಕಾರ್ಯದರ್ಶಿ ವೀರೇಶ್, ಪ್ರಮುಖರಾದ ಬಿ,ವಿ.ದಾನಮ್ಮ ಮುದಿಯಪ್ಪ, ಎಸ್.ಎಂ.ಅಡಿವೆಯ್ಯ ಸ್ವಾಮಿ, ಗುಡಟ್ಟಿ ಈರಣ್ಣ, ಅನಿಲ್ ಕುಮಾರ್, ಹನುಮಂತ ಬಿ, ಭಜಂತ್ರಿ ರಮೇಶ್, ಎರ‌್ರಪ್ಪ, ಮರಿಸ್ವಾಮಿ, ಸುಜಾತಮ್ಮ, ರಾಜಮ್ಮ, ಅನುರಾಧಾ, ಸ್ನೇಹಲತಾ, ಪೂಜಾರಿ ಲಕ್ಷ್ಮಮ್ಮ, ನೆನಕ್ಕಿ ದ್ಯಾವಮ್ಮ, ಬಸೀರ ಬೇಗಂ,ಪಾರ್ವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net