ಸಿರಿಗೇರಿ ಗ್ರಾಪಂ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್: ಪ್ರಮುಖ ಕಡತಗಳು ಬೆಂಕಿಗಾಹುತಿ

13092021 Sirigeri GP office shortciuit
Published on

ಸಿರಿಗೇರಿ: ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ನರೇಗಾ ಸೇರಿದಂತೆ ಮತ್ತಿತರ ಕಡತಗಳು ಸುಟ್ಟಿವೆ.

ಎಂದಿನಂತೆ ಸಿಬ್ಬಂದಿ ಬಾಗಿಲು ತೆರದಾಗ ಬೆಂಕಿ ಅನಾಹುತ ನಡೆದಿರುವುದು ಬೆಳಕಿಗೆ ಬಂದಿದೆ. ಪಿಡಿಒ ರಾಜೇಶ್ವರಿ ಮಾತನಾಡಿ, ಶಾರ್ಟ್ ಸರ್ಕ್ಯೂಟ್‌ನಿಂದ ಆಗಿರಬಹುದು. ಈ ಹಿಂದೆಯೂ ಎರಡ್ಮೂರು ಸಲ ಇದೇ ರೀತಿ ಆಗಿತ್ತು. 2020-21, 22ನೇ ಸಾಲಿನ ಕಾಮಗಾರಿ ಕಡತಗಳು, ಸಾಮಾಜಿಕ ಲೆಕ್ಕ ಪರಿಶೋಧಕಕ್ಕೆ ಒಳಪಡಿಸಿರುವ ದಾಖಲೆ, ಸ್ಥಳೀಯ ಕಾಮಗಾರಿ ಫೋಟೋಗಳು, ಅಳತೆ ಪುಸ್ತಕಗಳು ಸುಟ್ಟಿವೆ ಎಂದು ತಿಳಿಸಿದರು. ತಾಪಂ ಇಒ ಶಿವಪ್ಪ ಸುಬೇದಾರ್, ವ್ಯವಸ್ಥಾಪಕ ಅಲ್ಲಾಭಕ್ಷಿ, ನರೇಗಾ ತಾಂತ್ರಿಕ ಸಹಾಯಕಿ ಯಶೋದಾ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net